ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಪರಿಣಾಮಕಾರಿ ಜಾರಿಗೆ ಎಸ್ಮಾ ಮತ್ತು ಕೋಕಾ ಕಾಯ್ದೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಮಂಡಲದಲ್ಲಿ ಶುಕ್ರವಾರ ಮಂಡಿಸಿದ 4ನೇ ಹಾಗೂ ಬಿಜೆಪಿ ಸರ್ಕಾರದ 2ನೇ ಬಜೆಟ್‌ನಲ್ಲಿ ಈ ವಿಷಯ ತಿಳಿಸಿದರು.
ಈ ವರ್ಷ 3,840 ಪೊಲೀಸ್ ಸಿಬ್ಬಂದಿ ಹೊಸದಾಗಿ ನೇಮಕ ಮಾಡಿಕೊಳ್ಳುವ ಮೂಲಕ ಪೊಲೀಸ್ ಬಲವನ್ನು ಮತ್ತಷ್ಟು ಸದೃಢಗೊಳಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯ ದೃಢತೆ ಹೆಚ್ಚಿಸಲು ಇನ್ನು 3ಇಂಡಿಯನ್ ರಿಸರ್ವ್ ಬೆಟಾಲಿಯನ್ ಸ್ಥಾಪಿಸಲು ನಿರ್ಧರಿಸಲಾಗಿದೆ.
ಮಲೆನಾಡು ಪ್ರದೇಶದಲ್ಲಿ ಹೊಸ ಐದು ಪೊಲೀಸ್ ಠಾಣೆಗಳು ಬೆಂಗಳೂರು ನಗರ ಸಂಚಾರಿ ಸುಗಮಗೊಳಿಸಲು ಬಿ.ಟ್ರ್ಯಾಕ್ ಯೋಜನೆಗೆ 40ಕೋಟಿ ರೂ.ಒದಗಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಮತ್ತು ಭಯೋತ್ಪಾದಕರು,ನಕ್ಸಲರು ಇತರ ಅಪರಾಧ ನಿಯಂತ್ರಣಕ್ಕೆ 475 ವಿವಿಧ ಹುದ್ದೆಗಳನ್ನೊಳಗೊಂಡ ಆಂತರಿಕ ಭದ್ರತಾ ವಿಭಾಗವನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಉಸ್ತುವಾರಿಯಲ್ಲಿ ರಚಿಸಲಾಗಿದೆ ಎಂದು ಹೇಳಿದರು. |