ಗುಲ್ಬರ್ಗ ಹಾಗೂ ಧಾರವಾಡ ಸಂಚಾರಿ ಪೀಠಗಳಿಗೆ ದಿಢೀರ್ ವರ್ಗಾವಣೆಗೊಂಡ ಹೈಕೋರ್ಟ್‌ನ 174 ಸಿಬ್ಬಂದಿಯ ಪ್ರತಿಭಟನೆಗೆ ಪ್ರೋತ್ಸಾಹ ನೀಡಿದ ಪೈಕಿ 27ಮಂದಿಯನ್ನು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.
ಈ ಸಿಬ್ಬಂದಿ ಕರ್ತವ್ಯಲೋಪ ಎಸಗಿರುವುದಾಗಿ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ತಮ್ಮ ಸಹೋದ್ಯೋಗಿಗಳಿಗೆ ಬೆಂಬಲ ನೀಡಿದ್ದೇ ಈ ಸಿಬ್ಬಂದಿಗೆ ಈಗ ಕಂಟಕಪ್ರಾಯವಾಗಿದೆ.
ಸಿಬ್ಬಂದಿಯ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯನ್ಯಾಯಮೂರ್ತಿಗಳು ಹೇಳಿದರೂ, ಅದನ್ನ ಕಡೆಗಣಿಸಿ ಮುಷ್ಕರ ನಿರತರಾಗಿರುವುದು ಹೈಕೋರ್ಟ್ ನಿಯಮದ ಉಲ್ಲಂಘನೆ ಆಗಿದೆ ಎಂದು ಅಮಾನತು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಾಗೆಯೇ ಈಗಾಗಲೇ ವರ್ಗಾವಣೆಗೊಂಡಿರುವ ಸಿಬ್ಬಂದಿಯ ವರ್ಗಾವಣೆ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂದೆಗೆಕೊಳ್ಳಲು ಆಗುವುದಿಲ್ಲ, ಒಮ್ಮೆ ಅವರು ತಮಗೆ ತಿಳಿಸಿರುವ ಸ್ಥಳಗಳಿಗೆ ಹೋಗಿ ಕೆಲಸಕ್ಕೆ ಹಾಜರಾದ ನಂತರ, ಅವರನ್ನು ಖುದ್ದಾಗಿ ಕರೆದು ಸಮಸ್ಯೆ ಆಲಿಸಿ, ಅವರ ಮನವಿ ಪರಿಗಣಿಸುವುದಾಗಿ ಮುಖ್ಯನ್ಯಾಯಮೂರ್ತಿಗಳು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ 27ಮಂದಿಯನ್ನು ಅಮಾನತು ಮಾಡಿರುವ ಕಾರಣ, ರಾಜ್ಯದ ವಿವಿಧ ಕೋರ್ಟ್‌ಗಳಿಂದ ಸುಮಾರು 15ಮಂದಿ ಶೀಘ್ರಲಿಪಿಗಾರರನ್ನು ಹೈಕೋರ್ಟ್‌ಗೆ ಕರೆಯಿಸಿಕೊಳ್ಳಲಾಗಿದೆ. |