ಸಿಲಿಕಾನ್ ಸಿಟಿಯಿಂದ ಅಕ್ರಮವಾಗಿ ವಿದೇಶಕ್ಕೆ ಸುಮಾರು 8ಕೋಟಿ ರೂ.ಮೌಲ್ಯದ ಹೆರಾಯಿನ್ ಸಾಗಿಸಲು ಯತ್ನಿಸಿದ್ದ ಇಬ್ಬರು ವಿದೇಶಿಯರನ್ನು ಶನಿವಾರ ಬೆಳಿಗ್ಗೆ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆರೆಸಿಕ್ಕವರು ಶಿಲ್ಲಾಂಗ್ ಹಾಗೂ ನೈಜೀರಿಯಾದ ಪ್ರಜೆಗಳಾರಿದ್ದಾರೆ. ಇವರಿಬ್ಬರು ಸುಮಾರು 8 ಕೋಟಿಯಷ್ಟು ಬೆಲೆ ಬಾಳುವ 2.5 ಕೆ.ಜಿಯಷ್ಟು ಹೆರಾಯಿನ್ ಮಾದಕ ಪದಾರ್ಥವನ್ನು ಫೆಡೆಕ್ಸ್ ಕೊರಿಯರ್ ಮೂಲಕ ಅಕ್ರಮವಾಗಿ ವಿದೇಶಗಳಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದರು.
ಶನಿವಾರ ಮುಂಜಾನೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಹೆರಾಯಿನನ್ನು ವಶಪಡಿಸಿಕೊಂಡಿದ್ದಾರೆ. ಕೊರಿಯರ್ ಕಚೇರಿಯ ನೌಕರರು ನೀಡಿದ ಖಚಿತ ಸುಳಿವಿನ ಮೇರೆಗೆ ಕಸ್ಟಮ್ಸ್ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು,ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. |