ಜನತಾ ಪರಿವಾರದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಫೆ.26 ರಂದು ಹುಬ್ಬಳ್ಳಿಯಲ್ಲಿ ಜನತಾ ಪರಿವಾರದವರ ಸಭೆ ಕರೆಯಲಾಗಿದೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯ ತಿಳಿಸಿದ್ದಾರೆ.
ತಮ್ಮ ಬೆಂಬಲಿಗರ ಒತ್ತಾಯದ ಮೇರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದು, ಈ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಸೇರಿದಂತೆ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಜನತಾ ಪರಿವಾರದ ಹಿರಿಯ ಮುಖಂಡರಾದ ಓಂ ಪ್ರಕಾಶ್ ಸಿಂಗ್, ವೀರೇಂದ್ರ ಕುಮಾರ್, ಶ್ರೀಮತಿ ಎಂ.ಎಸ್.ಅಪ್ಪುರಾವ್ ಭಾಗವಹಿಸಲಿದ್ದಾರೆ. ರಾಜ್ಯದ ಜನತಾ ಪರಿವಾರದ ನಾಯಕರಿಗೂ ಆಹ್ವಾನ ನೀಡಿದ್ದು, ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು
ಮುಖ್ಯಮಂತ್ರಿ ಯಡಿಯೂರಪ್ಪ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡುಬಜೆಟ್ ಪ್ರಕಟಿಸಿದ್ದಾರೆ. ಆದರೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ 2009-10ನೇ ಸಾಲಿನಲ್ಲಿ 10 ರಿಂದ 12 ಸಾವಿರ ಕೋಟಿ ರೂ. ಆದಾಯ ಕೊರತೆಯಾಗಲಿದೆ ಎಂದಿದ್ದಾರೆ. |