ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೀಘ್ರವೇ ರಾಜ್ಯ ಯುವ ಕಾಂಗ್ರೆಸ್ ಬಲವರ್ಧನೆ: ಬೈರೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ರಾಜ್ಯ ಯುವ ಕಾಂಗ್ರೆಸ್ ಬಲವರ್ಧನೆ: ಬೈರೇಗೌಡ
ಗುಜರಾತ್‌ನಲ್ಲಿ ಯುವ ಕಾಂಗ್ರೆಸ್‌‌ನ ವಿವಿಧ ಸಮಿತಿಗಳ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿರುವ ಚುನಾವಣಾ ಮಾದರಿಯಲ್ಲಿ ಕರ್ನಾಟಕ ಯುವ ಕಾಂಗ್ರೆಸ್‌‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಯುವ ಕಾಂಗ್ರಸೆ ಅಧ್ಯಕ್ಷ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಯುವ ಕಾಂಗ್ರೆಸ್ ಬಲಗೊಳಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯೊಳಗೆ ಜಿಲ್ಲಾಮಟ್ಟದ ಸಮಾವೇಶ ನಡೆಸಲಾಗುವುದು. ಯುವ ಕಾಂಗ್ರೆಸ್‌‌ನ ತಳಮಟ್ಟದಿಂದ ಸಂಘಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬ್ಲಾಕ್ ಮಟ್ಟದಿಂದ ಜಿಲ್ಲಾ ಮಟ್ಟದ ಸಮಿತಿಗಳನ್ನು ಪುನರ್ರಚಿಸಬೇಕಾಗಿದ್ದು, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಭೆಗಳನ್ನು ನಡೆಸಲಾಗುತ್ತಿದೆ. ಇದೇ ಉದ್ದೇಶಕ್ಕಾಗಿ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು.

ರಾಹುಲ್ ಗಾಂಧಿ ಉಸ್ತುವಾರಿ ವಹಿಸಿಕೊಂಡ ನಂತರ ಯುವ ಕಾಂಗ್ರೆಸ್‌‌ಗೆ ಸಾಕಷ್ಟು ಬಲ ಬಂದಿದೆ. ರಾಜಕೀಯಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಧುಮುಕಬೇಕು. ಹಾಗಾದಾಗ ಮಾತ್ರ ಬದಲಾವಣೆ ಸಾಧ್ಯ ಎಂಬುದು ರಾಹುಲ್ ಗಾಂಧಿ ಆಶಯ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ಯುವಕರನ್ನು ಸಂಘಟಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆ ನಡೆಸುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಕೃಷ್ಣಬೈರೇಗೌಡ ಅವರನ್ನು ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರು ತರಾಟೆಗೆ ತೆಗೆದುಕೊಂಡರು. ಖರ್ಗೆ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂದು ಖರ್ಗೆ ಬೆಂಬಲಿಗರು ಕೃಷ್ಣೇಬೈರೇಗೌಡರನ್ನು ಪ್ರಶ್ನಿಸಿದಾಗ, ಇದು ಹೈಕಮಾಂಡ್‌‌ಗೆ ಬಿಟ್ಟ ವಿಷಯ. ಇದರಿಂದ ಕುಪಿತಗೊಂಡ ಬೆಂಬಲಿಗರು, ಹಿರಿಯ ನಾಯಕನಿಗೆ ಅನ್ಯಾಯವಾಗುತ್ತಿದ್ದರೆ ನೀವೆಲ್ಲ ಮೌನವಾಗಿದ್ದೀರಿ. ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಗಳೂರಿಗೆ ಕಾಲಿರಿಸದಂತೆ ಮುತಾಲಿಕ್‌‌ಗೆ ನೋಟಿಸ್ ?
ವರ್ಗಾವಣೆಗೆ ಕಟ್ಟುನಿಟ್ಟಿನ ನೀತಿ: ಸಿಎಂ
ಧರಣಿ ಮಾಡುವ ಯೋಗ್ಯತೆ ಗೌಡರಿಗಿಲ್ಲ: ರೆಡ್ಡಿ
ಹಾವಿನ ವಿಷ ಮಾರಾಟ: ಮೂವರ ಬಂಧನ
ಜನತಾ ಪರಿವಾರ ಒಗ್ಗೂಡಿಸಲು ಸಿಂಧ್ಯ ನಿರ್ಧಾರ
ಯೋಜನಾ ವೆಚ್ಚದ ಶ್ವೇತಪತ್ರ ಹೊರಡಿಸಿ:ದೇಶಪಾಂಡೆ