ರಾಜ್ಯದಲ್ಲಿ ಕೆರೆಗಳ ಅಭಿವೃದ್ದಿಗೆ ಕಾಮಗಾರಿಗಳ ಮೇಲುಸ್ತುವಾರಿ ಹಾಗೂ ನಿರ್ವಹಣೆಗೆ ಕೆರೆ ಅಭಿವೃದ್ದಿ ಸಂಘಗಳನ್ನು ರಚಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕೆರೆ ಅಭಿವೃದ್ದಿ ಸಂಘಗಳಿಗೆ ಆಯಾಯ ಗ್ರಾಮಗಳಲ್ಲಿಯೇ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಆ ಸಂಘಗಳು ಕೆರೆ ಅಭಿವೃದ್ದಿಗೆ ಸಂದರ್ಭದಲ್ಲಿ ಕಾಮಗಾರಿಗಳ ಗುಣಮಟ್ಟವನ್ನು ನೋಡಿಕೊಳ್ಳುವುದರ ಜೊತೆಗೆ ಕೆರೆಗಳ ಒತ್ತುವರಿಯಾಗಿದ್ದರೆ ತೆರವು ಹಾಗೂ ಆನಂತರ ಕೆರೆಗಳ ಸಂರಕ್ಷಣಾ ಜವಾಬ್ದಾರಿಯನ್ನೂ ಹೊಂದಿರುತ್ತದೆ.
ಅಚ್ಚುಕಟ್ಟು ಪ್ರದೇಶವಿಲ್ಲದ ಪಟ್ಟಣ ಹಾಗೂ ನಗರ ಪ್ರದೇಶದ ಕೆರೆಗಳನ್ನುಇ ಪಟ್ಟಣ ಪಂಚಾಯ್ತಿ, ಪುರಸಭೆ, ನಗರ ಸಭೆಗಳಿಗೆ ವಹಿಸಿಕೊಡಲು ನಿರ್ಧರಿಸಲಾಗಿದೆ. ಈಗಾಗಲೇ ತುಮಕೂರಿನ ಅಮಾನಿ ಕೆರೆಯನ್ನು ಅಲ್ಲಿನ ನಗರಸಭೆಗೆ ಹಾಗೂ ಚಿಕ್ಕಮಗಳೂರಿನ ಎರಡು ಕೆರೆಗಳನ್ನು ಚಿಕ್ಕಮಗಳೂರಿನ ನಗರಸಭೆಗೆ ವಹಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಸರ್ಕಾರದ ಸಹಭಾಗಿತ್ವದಲ್ಲಿ ಆ ಕೆರೆಗಳ ಮಾಡಲಿವೆ.
2009-10ನೇ ಸಾಲಿನ ಬಜೆಟ್‌ನಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ದಿಗೆ ಮುಖ್ಯಮಂತ್ರಿಯವರು 225 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ ಎಂದು ಸಚಿವ ಕಾರಜೋಳ ಹೇಳಿದರು. |