ವ್ಯಾಲೆಂಟೈನ್ಸ್ ಡೇಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ ಶ್ರೀರಾಮಸೇನೆಯ ವಿರುದ್ದ 'ಪಿಂಕ್ ಚಡ್ಡಿ' ರವಾನಿಸುವ ಸಮರ ಸಾರಿದವರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.' ಪಿಂಕ್ ಚಡ್ಡಿ' ರವಾನೆ ಮಾಡಿರುವ ಪ್ರತಿಭಟನಾಕಾರರದ್ದು ವಕ್ರಬುದ್ದಿಯ ನಡವಳಿಕೆ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಪ್ಯಾಂಟಿಸ್ ಪಾರ್ಸೆಲ್ ರವಾನಿಸಿದವರ ವಿರುದ್ಧ ಸುಮಾರು 25ಮಂದಿ ವಕೀಲರನ್ನೊಳಗೊಂಡ ತಂಡ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದು ಅವರು ವಿವರಿಸಿದರು.ಪ್ರೇಮಿಗಳ ದಿನಾಚರಣೆಯಂದ ಸೆರೆಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್‌ಗೆ ಪಿಂಕ್ ಚಡ್ಡಿ ಕಳುಹಿಸುವಂತೆ ಪತ್ರಕರ್ತೆ ಸುಸಾನ್ ಕರೆ ನೀಡಿದ್ದು, ಅದರಂತೆ ಫೆ.14ರಂದು ಹುಬ್ಬಳ್ಳಿಯಲ್ಲಿರುವ ಮುತಾಲಿಕ್ ಕಚೇರಿ ತುಂಬಾ ಪಿಂಕ್ ಚಡ್ಡಿಗಳಿಂದಲೇ ತುಂಬಿ ಹೋಗಿತ್ತು.ಪಬ್ ಸಂಸ್ಕೃತಿ ಮತ್ತು ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿದ ಶ್ರೀರಾಮಸೇನೆಯನ್ನು ಪ್ರತಿಭಟನಾಕಾರರು ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬರುವಂತೆ ಮಾಡಿದ್ದು, ಆ ನಿಟ್ಟಿನಲ್ಲಿ ಕರ್ನಾಟಕದ ಹೊರಭಾಗದಲ್ಲೂ ಸೇನೆಯ ಕಚೇರಿಯನ್ನು ತೆರೆಯುವುದಾಗಿ ಮುತಾಲಿಕ್ ಈ ಸಂದರ್ಭದಲ್ಲಿ ತಿಳಿಸಿದರು. |