ಪೊಲೀಸರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕೈವಾಡ ಇದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರು ನೀಡಿರುವ ಹೇಳಿಕೆಗೆ ಶಾಸಕ ಸಿ.ಟಿ.ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನಿರ್ದೇಶಿಸಿದಂತೆ ಪೊಲೀಸರ ವರ್ಗಾವಣೆ ಮಾಡಲಾಗಿದೆ ಹೊರತು ಯಡಿಯೂರಪ್ಪ ಹಾಗೂ ಅವರ ಮಕ್ಕಳ ಚಿತಾವಣೆಯಿಂದ ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಕೆಲವು ನಾಯಕರನ್ನು ನಾಡಿನ ಜನ ಮರೆಯಬೇಕೆಂದುಕೊಂಡರು. ಏನಾದರೊಂದು ಖ್ಯಾತೆ ತೆಗೆದು ಮತ್ತೆ ಮತ್ತೆ ಸುದ್ದಿ ಮಾಡುವ ನಾಯಕರಲ್ಲಿ ಮೊಯ್ಲಿಯವರು ಒಬ್ಬರು ಎಂದು ಟೀಕಿಸಿದ್ದಾರೆ.
ಸಾವಿರ ಸುಳ್ಳಿನ ಸರದಾರ ಎಂದೇ ಖ್ಯಾತರಾಗಿರುವ ಮೊಯ್ಲಿ ಅವರು ನೀತಿ ಪಾಠ ಬೋಧಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. |