ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕುಮಾರ ಉದಾಸಿಗೆ ಹಾವೇರಿ ಲೋಕಸಭಾಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡದಿದ್ದರೆ ರಾಜೀನಾಮೆ ನೀಡುವುದಾಗಿ ಸಚಿವ ಸಿ.ಎಂ.ಉದಾಸಿ ಬೆದರಿಕೆ ಹಾಕಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಊಹಾಪೋಹ ಹರಿದಾಡತೊಡಗಿದೆ.
ಟಿಕೆಟ್ ಹಂಚಿಕೆ ಸಂಬಂಧ ನಡೆದ ಸಭೆಯಲ್ಲಿ ಈ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ನನ್ನ ಮಗನೆಂದು ಪರಿಗಣಿಸಿ ಪರಿಗಣಿಸಿ ಟಿಕೇಟ್ ನೀಡುವುದು ಬೇಡ. ಆತ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮೇಲಾಗಿ ಆ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ. ಇದನ್ನಾದರೂ ಪರಿಗಣಿಸಿ ಟಿಕೆಟ್ ನೀಡಬೇಕೆಂದು ಉದಾಸಿ ಒತ್ತಾಯಿಸಿದರೆನ್ನಲಾಗಿದೆ. ಇದಕ್ಕೆ ಮುಖಂಡರು ಸರಿಯಾಗಿ ಉತ್ತರ ನೀಡಲಿಲ್ಲ ಎನ್ನಲಾಗಿದೆ.
ಆಗ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪಕ್ಷದ ಕೆಲ ಮುಖಂಡರು ಉದಾಸಿ ಅವರನ್ನು ಸಭಾ ಸ್ಥಳದಿಂದ 20 ನಿಮಿಷ ಹೊರಗೆ ಕರೆದುಕೊಂಡು ಹೋಗಿ, ಸಮಾಧಾನಪಡಿಸಿ ಸಭೆಗೆ ವಾಪಸು ಕರೆದುಕೊಂಡು ಬಂದರೆನ್ನಲಾಗಿದೆ. ಇದೇ ವೇಳೆ ಟಕೇಟ್ ಹಂಚಿಕೆ ಕುರಿತು ಆರ್ಎಸ್ಎಸ್ ಮುಖಂಡರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಮಧ್ಯರಾತ್ರಿವರೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. |