ಆಡಳಿತಾರೂಢ ಬಿಜೆಪಿ ಸರಕಾರ ಹಾಗೂ ಕೆಎಂಎಫ್ ನಡುವಿನ ಲೆಕ್ಕ ಪತ್ರ ಮರುಪರಿಶೀಲನಾ ಜಟಾಪಟಿ ವಿವಾದದಲ್ಲಿ ಕೊನೆಗೂ ಕೆಎಂಎಫ್ ಮುಖಭಂಗ ಅನುಭವಿಸುವಂತಾಗಿದೆ.
ಕೆಎಂಎಫ್ ಲೆಕ್ಕಮರುಪರಿಶೀಲನೆಗೆ ಸರಕಾರ ಆದೇಶ ನೀಡಿದ್ದನ್ನು ಪ್ರಶ್ನಿಸಿ ಕೆಎಂಎಫ್ ಹೈಕೋರ್ಟ್ ಮೆಟ್ಟಿಲೇರಿತ್ತು, ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಕೆಎಂಎಫ್‌ನ ಲೆಕ್ಕಮರುಪರಿಶೀಲನೆಗೆ ಸರಕಾರ ಆದೇಶಿಸಿರುವ ಹಿಂದೆ ಯಾವುದೇ ದುರುದ್ದೇಶ ಕಾಣುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ತಿರಸ್ಕೃರಿಸುವ ಮೂಲಕ ಕೆಎಂಎಫ್ ಹಿನ್ನಡೆ ಅನುಭವಿಸಿದೆ.
ರಾಜ್ಯ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ಕೆಎಂಎಫ್ ವಿರುದ್ಧ ಅನಾವಶ್ಯಕವಾಗಿ ತನಿಖೆ, ಲೆಕ್ಕಪರಿಶೋಧನೆಗೆ ಆದೇಶಿಸುತ್ತಿದೆ ಎಂದು ಎಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ ಈ ವಿವಾದ ರೇವಣ್ಣ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ನಡುವಿನ ಜಟಾಪಟಿ ಎಂದೇ ಬಿಂಬಿಸಲಾಗಿತ್ತು. |