ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರಾಕೃತ ಭಾಷೆಗಳ ಕಡೆಗಣಿಸಿದ ಕೇಂದ್ರ: ಹಂಪನಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಾಕೃತ ಭಾಷೆಗಳ ಕಡೆಗಣಿಸಿದ ಕೇಂದ್ರ: ಹಂಪನಾ
AvinashWD
ಸಂಸ್ಕೃತಕ್ಕೆ ಸಮವಾದ ಸಾಮರ್ಥ್ಯವುಳ್ಳ, ಅಷ್ಟೇ ಪ್ರಾಚೀನ, ಅಷ್ಟೇ ಮಹತ್ವವುಳ್ಳ ಮತ್ತು ಸಾಹಿತ್ಯಕವಾಗಿ ಸಮೃದ್ಧವಾಗಿದ್ದ ಇತರ ಭಾಷೆಗಳಿದ್ದರೂ, ಬ್ರಿಟಿಷರ ಕಾಲವೂ ಸೇರಿದಂತೆ ನೂರಾರು ವರ್ಷಗಳಿಂದಲೂ ಸರಕಾರದಿಂದ ಹಣಕಾಸು ಸೇರಿದಂತೆ ಗರಿಷ್ಠ ಲಾಭವನ್ನು ಸಂಸ್ಕೃತ ಪಡೆದುಕೊಂಡಿತ್ತು ಎಂದು ಹೇಳಿರುವ ಹಿರಿಯ ಸಾಹಿತಿ, ಬೆಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಹಂಪ ನಾಗರಾಜಯ್ಯ, ಕೇಂದ್ರದಲ್ಲಿನ ಸರಕಾರಗಳು ಇದುವರೆಗೂ ಪಾಲಿ ಭಾಷೆಗೆ ಮಹತ್ವ ನೀಡುತ್ತಾ, ಪ್ರಾಕೃತ ಭಾಷೆಗಳನ್ನು ಕಡೆಗಣಿಸುತ್ತಲೇ ಇದೆ ಎಂದು ವಿಷಾದಿಸಿದರು.

ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಿವಿ ಆವರಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ 'ಶಾಸ್ತ್ರೀಯ ಭಾಷೆಗಳ ವೈಶಿಷ್ಟ್ಯ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಶಿಖರೋಪನ್ಯಾಸ ನೀಡಿದ ಅವರು, ಕ್ರಿಸ್ತಪೂರ್ವ 5ನೇ ಶತಮಾನದಿಂದಲೂ ಪ್ರಾಕೃತ ಭಾಷಾ ಸಾಹಿತ್ಯಗಳು ಲಿಖಿತ ರೂಪದಲ್ಲಿ ಸಮೃದ್ಧವಾಗಿದ್ದರೂ, ಅವುಗಳನ್ನು ಸೂಕ್ತ ಮಟ್ಟದಲ್ಲಿ ಗುರುತಿಸಲಿಲ್ಲ, ಬದಲಾಗಿ ನಿರ್ಲಕ್ಷಿಸುತ್ತಾ ಬರಲಾಯಿತು ಎಂದರು.

ಆರ್ಯರ ಭಾಷೆ ಮತ್ತು ದ್ರಾವಿಡ ಭಾಷೆಗಳ ಮಧ್ಯೆ ಇರುವ ಮಹತ್ವಪೂರ್ಣ ವ್ಯತ್ಯಾಸವಿದೆ. ದ್ರಾವಿಡ ಭಾಷೆಗಳು ಅನುಭವಪೂರ್ಣತೆಯೊಂದಿಗೆ ಸ್ತ್ರೀಯರ ಬಗ್ಗೆ ಕನಿಕರಪೂರ್ಣವೂ ಆಗಿದ್ದವು. ಆರ್ಯರಲ್ಲಿ ಮಹಿಳೆಯರು ವೇದ ಓದುವಂತಿಲ್ಲ, ಅಧ್ಯಯನ ನಡೆಸುವಂತಿಲ್ಲ, ಸ್ಮಶಾನಕ್ಕೆ ಹೋಗಿ ರೋದಿಸುವಂತಿಲ್ಲ ಎಂಬಿತ್ಯಾದಿ ಕಟ್ಟುಪಾಡುಗಳಿದ್ದರೆ, ದ್ರಾವಿಡ ಭಾಷೆಯು ಸ್ತ್ರೀಯರಿಗೂ ಈ ಅವಕಾಶಗಳನ್ನು ನೀಡಿ, ಅವರ ಬಗೆಗೂ ದಯೆ, ಕನಿಕರ ತೋರಿದೆ ಎಂದು ಹೇಳಿದರು.

ನೆರೆಯ ಭಾಷೆಗಳ ಬಗೆಗೆ ಸಾಮರಸ್ಯವಿರಬೇಕು, ಗೌರವವಿರಬೇಕು ಎಂದು ಉಲ್ಲೇಖಿಸುತ್ತಾ ಡಾ.ಹಂಪನಾ, 16ನೇ ಶತಮಾನದ ಆದಿಭಾಗದಲ್ಲೇ ಭರತೇಶ ವೈಭವ ಬರೆದಿದ್ದ ಕವಿ ರತ್ನಾಕರವರ್ಣಿ "ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು, ರಯ್ಯ ಮಂಚೆದಿ ಎನೆ ತೆಲುಗ, ಅಯ್ಯಯ್ಯ ಎಂಚ ಪೊರ್ಲಾಂಡೆಂದ್ ತುಳುವರು ಮೈಯುಬ್ಬಿ ಕೇಳಬೇಕಣ್ಣ" ಎಂದಿದ್ದ. ಇಂದು ನಾವು ಇಂಗ್ಲಿಷ್ ಬಗ್ಗೆ, ರಷ್ಯನ್ ಬಗ್ಗದೆ, ಜರ್ಮನ್ ಭಾಷೆ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ನೆರೆಕರೆಯ ಭಾಷೆಯ ಕುರಿತು ಧ್ವನಿಯೆತ್ತುವುದಿಲ್ಲ. ಈ ನಿಟ್ಟಿನಲ್ಲಿ ನಮಗೆ ರತ್ನಾಕರ ವರ್ಣಿ ಆದರ್ಶಪ್ರಾಯವಾಗಬೇಕು ಎಂದು ಹೇಳಿದರು.

ತಮಿಳಿನ ತಿರುಕ್ಕುರಳ್ ಮಹಾನ್ ಶ್ರೇಷ್ಠ ಕೃತಿಯಾಗಿದ್ದು, ಅದಕ್ಕೆ ಪರ್ಯಾಯವಿಲ್ಲ. ಅದನ್ನು ಬರೆದ ತಿರುವಳ್ಳುವರ್ ಅವರಂತೂ ಶ್ರೇಷ್ಠ ವಿದ್ವಾಂಸ, ಸಾಹಿತ್ಯದ ಅನರ್ಘ್ಯ ರತ್ನ ಎಂದು ಡಾ.ಹಂಪನಾ ಶ್ಲಾಘಿಸಿದರು.

ಮದರಾಸು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್.ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಪ್ರಭಾರ ಅಧಿಕಾರಿ ಪ್ರೊ.ಕೆ.ರಾಮಸ್ವಾಮಿ ಮುಖ್ಯ ಅತಿಥಿಯಾಗಿದ್ದರು.

ವಿಚಾರ ಸಂಕಿರಣದ ನಿರ್ದೇಶಕಿ, ಮದರಾಸು ವಿವಿ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕ ಪ್ರೊ.ಶ್ರೀಕೃಷ್ಣ ಭಟ್ ಅರ್ತಿಕಜೆ ಅತಿಥಿಗಳನ್ನು ಗೌರವಿಸಿದರು. ಪ್ರಶಾಂತ್ ಕುಮಾರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜಣ್ಣ ಸ್ವಾಗತಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಆಡುಭಾಷಾ ಪದಕೋಶ ಸಂಗ್ರಹ ತಕ್ಷಣದ ಅನಿವಾರ್ಯತೆ'
ಪಶ್ಚಿಮ ಘಟ್ಟದ ನದಿ ನೀರು ಬಳಕೆಗೆ ಕ್ರಮ
ವೈದ್ಯರ ರಾತ್ರಿ ವಾಸ್ತವ್ಯ ಕಡ್ಡಾಯ: ಶ್ರೀರಾಮುಲು
ಹಾಸನದಿಂದಲೇ ಸ್ಪರ್ಧೆ: ದೇವೇಗೌಡ
ಮಳೆ ಬೆಳೆಯಾಗಲು ಮಠಗಳಿಗೆ ಹಣ: ಸಿಎಂ ಸಮರ್ಥನೆ
ಮಹಾರಾಷ್ಟ್ರ ರಾಜಕಾರಣಿಗಳು ಉಗ್ರರು: ನಾರಾಯಣಗೌಡ