ಪ್ರೇಮಿಗಳ ದಿನಾಚರಣೆಯ ದಿನದಂದು ಕಾಣಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ ಪ್ರತಿಯಾಗಿ, ಪಿಂಕ್ ಚಡ್ಡಿ ಅಭಿಯಾನ ನಡೆಸಿದ್ದ ಪತ್ರಕರ್ತೆ ನಿಶಾ ಸೂಸಾನ್ ಸೇರಿದಂತೆ ಎಂಟು ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕ್ಷಮೆ ಯಾಚಿಸುವಂತೆ ಆಗ್ರಹಿಸಲಾಗಿದೆ ಎಂದು ಮುತಾಲಿಕ್ ಪರ ವಕೀಲರು ತಿಳಿಸಿದ್ದಾರೆ.ನಗರದ ಪಬ್ ಮೇಲಿನ ದಾಳಿಯ ನಂತರ ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರು ಪ್ರೇಮಿಗಳ ದಿನಾಚರಣೆಯಂದು ಕಾಣಸಿಗುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದ ಹುಟ್ಟು ಹಾಕಿತ್ತು. ಆದರೆ ಪತ್ರಕರ್ತೆ ನಿಶಾ ಸೂಸಾನ್ ಪಿಂಕ್ ಚಡ್ಡಿ ಅಭಿಯಾನಕ್ಕೆ ಕರೆ ನೀಡಿದ್ದರು. ಅವರ ಕರೆಯಂತೆ ಪ್ರೇಮಿಗಳ ದಿನಾಚರಣೆಯ ಹಿಂದಿನ ದಿನ ಮುತಾಲಿಕ್ ಅವರ ಮನೆಗೆ ಸಾವಿರಾರು ಪಿಂಕ್ ಚಡ್ಡಿಗಳು ಕೊರಿಯರ್ ಮೂಲಕ ಬಂದಿದ್ದವು. ಪಿಂಕ್ ಚಡ್ಡಿ ಕಳುಹಿಸುವ ಮೂಲಕ ನಿಶಾ ಅವರು ಮುತಾಲಿಕ್ ಹಾಗೂ ಹಿಂದೂ ಸಂಸ್ಕೃತಿಯನ್ನೇ ಅವಹೇನ ಮಾಡಿದ್ದಾರೆ ಎಂದು ಕುಲಕರ್ಣಿ ದೂರಿದ್ದಾರೆ.ಆ ನಿಟ್ಟಿನಲ್ಲಿ ಪ್ರಮೋದ್ ಮುತಾಲಿಕ್ ಮನೆಗೆ ಪಿಂಕ್ ಕಳುಹಿಸುವ ಅಭಿಯಾನ ಆರಂಭಿಸಿದ ಪತ್ರಕರ್ತೆ ಸೂಸಾನ್ ಸೇರಿ ಎಂಟು ಮಂದಿ ವಿರುದ್ಧ ನೋಟಿಸ್ ಕಳುಹಿಸಲಾಗಿದೆ. 15 ದಿನದೊಳಗೆ ಅವರು ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ. |