ಭೂಗತ ಪಾತಕಿ ರವಿ ಪೂಜಾರಿಗೆ ನಗರದ ಬಿಲ್ಡರ್‌ಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಮಾಹಿತಿ ನೀಡುತ್ತಿದ್ದರೆಂಬ ಆರೋಪದ ಮೇಲೆ ಆತನ 9 ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೇಗೂರು ನಿವಾಸಿ ಕವಿರಾಜ್ (32), ಅವಲಹಳ್ಳಿ ಮೋಹನ (27), ಜಯನಗರದ ಶಿವ (33), ಫ್ರೇಜರ್ ಟೌನ್ ಇಬ್ರಾಹಿಂ (37), ಜೆ.ಪಿ.ನಗರ ಮಹೇಶ (29), ಮಂಗಳೂರಿನ ಸಂತೊಷ (31), ದೇವ ಚಿಕ್ಕಹಳ್ಳಿ ಪ್ರದೀಪ್ (31), ಉತ್ತರ ಪ್ರದೇಶದ ಅಜಾದ್ (31), ನಗರದ ಟೆಲಿಕಾಂ ಲೇ ಔಟ್‌ನ ಉದಯ್ ಕುಮಾರ್ ಹೆಗ್ಡೆ (45) ಬಂಧಿತರು.
ರವಿ ಪೂಜಾರಿ ಇತ್ತೀಚೆಗೆ ನಗರದ ಬಿಲ್ಡರುಗಳಿಗೆ ರಹಸ್ಯ ಸ್ಥಳದಿಂದ ಕರೆ ಮಾಡಿ ಹಫ್ತಾ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ. ಈ ಸಂಬಂಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 6ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬಂಧಿತ ಆರೋಪಿಗಳು ನಗರದ ಬಿಲ್ಡರ್‌ಗಳ ದೂರವಾಣಿ ಹಾಗೂ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ ಪಾತಕಿಗಳಿಗೆ ನೀಡುತ್ತಿದ್ದರು. ಇವರು ಶಬ್‌ನಂ ಡೆವಲಪರ್ಸ್‌ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
|