ಆಡಳಿತಾರೂಢ ಬಿಜೆಪಿ ಸರಕಾರ ಮುಂದುವರಿಸಿರುವ ಆಪರೇಶನ್ ಕಮಲಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಂಟು ಮಂದಿ ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.
ಪ್ರತಿಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಭಾರತೀಯ ಜನತಾ ಪಕ್ಷ ಆಪರೇಶನ್ ಮುಂದುವರಿಸಿದೆ, ಶನಿವಾರ ಮೈಸೂರು ಮಹಾನಗರ ಪಾಲಿಕೆಯ 8ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಫೆ.19ರಂದು ಮೈಸೂರು ಮಹಾನಗರ ಪಾಲಿಕೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿತ್ತು, ಆ ಸಂದರ್ಭದಲ್ಲಿ ಪಕ್ಷೇತರರ ಅಭ್ಯರ್ಥಿಯನ್ನು ಅಪಹರಿಸಲು ಕಾಂಗ್ರೆಸ್ ಯತ್ನಿಸಿದೆ ಎಂಬ ಆರೋಪದ ನಡುವೆ ಮಾರಾಮಾರಿ ನಡೆದು ಪಾಲಿಕೆ ರಣರಂಗವಾಗಿತ್ತು. ಅಂತೂ ಕೊನೆಗೂ ಪಾಲಿಕೆಯ ಅಧ್ಯಕ್ಷ ಪಟ್ಟ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಗದ್ದುಗೆ ಜೆಡಿಎಸ್ ಪಾಲಾಗಿತ್ತು.
ಇದೀಗ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್‌ನ 8 ಸದಸ್ಯರು ಸೇರಿದಂತೆ ಒಟ್ಟು ಹತ್ತು ಮಂದಿ ಬಿಜೆಪಿಗೆ ಸೇರಿದ್ದು, ಬಿಜೆಪಿ ಬಲ ಮತ್ತಷ್ಟು ವೃದ್ದಿಗೊಂಡಂತಾಗಿದೆ. |