ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್‌‌ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌‌ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ: ಆಡ್ವಾಣಿ
ಭಯೋತ್ಪಾದನೆ ಜಾಗೃತಿ ಅಭಿಯಾನಕ್ಕೆ ತೆರೆ
ND
ಕಳೆದ ಎರಡು ದಶಕಗಳಿಂದ ಭಾರತ ನೆರೆಯ ದೇಶಗಳಿಂದ ಕಪಟ ಯುದ್ದವನ್ನು ಎದುರಿಸಿದೆ, ಆ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ವಿಶೇಷ ಕಾನೂನಿನ ಅಗತ್ಯ ಇರುವುದಾಗಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಅರಮನೆ ಮೈದಾನದಲ್ಲಿ ಶನಿವಾರ ಭಯೋತ್ಪಾದನಾ ಜಾಗೃತಿ ಅಭಿಯಾನದ ಬೃಹತ್ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿಹಾದಿ ಹೆಸರಲ್ಲಿ ಭಯೋತ್ಪಾದನೆ ರಣಕೇಕೆ ಹಾಕುತ್ತಿದೆ, ಆತ್ಮಹತ್ಯೆ, ಅತ್ಯಾಚಾರ, ಕೊಲೆಗಿಂತಲೂ ಭಯೋತ್ಪಾದನೆ ಅತ್ಯಂತ ಕ್ರೂರವಾದದ್ದು ಎಂದು ಹೇಳಿದ ಅವರು, ಸಂಸತ್ ಭವನದ ಮೇಲೆ ದಾಳಿ ಮಾಡಿದ ಮಾಸ್ಟರ್ ಮೈಂಡ್ ಆರೋಪಿ ಅಫ್ಜಲ್ ಗುರುಗೆ ನ್ಯಾಯಾಲಯ ಮರಣದಂಡನೆ ನೀಡಿದ್ದರೂ ಕೂಡ ಗಲ್ಲಿಗೇರಿಸಲು ಯುಪಿಎ ಮೀನ-ಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದರು.

ಹೀಗೆ ಮುಸ್ಲಿಂ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದ ಅವರು, ಆ ನಿಟ್ಟಿನಲ್ಲಿ ಕರ್ನಾಟಕದ ಬಿಜೆಪಿ ಸರಕಾರ ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ದೇಶದ ಇತರೆಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಪ್ರತಿ ರಾಜ್ಯ ಸರಕಾರವೂ ಕೂಡ ಕರ್ನಾಟಕದಲ್ಲಿ ಹಮ್ಮಿಕೊಂಡಂತೆ ಭಯೋತ್ಪಾದನಾ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದ ಆಡ್ವಾಣಿ, ಭಯೋತ್ಪಾದಕರು ಮುಸ್ಲಿಂ, ಸಿಖ್, ಹಿಂದೂ ಸಮುದಾಯಕ್ಕೆ ಸೇರದೆ ಅವರು ಮಾನವ ವಿರೋಧಿಗಳು ಎಂದು ಬಣ್ಣಿಸಿದರು.

ಸಮಾರೋಪ ಸಮಾರಂಭದ ಆರಂಭಕ್ಕೂ ಮುನ್ನ ಮೇ.ಸಂದೀಪ್ ಪೋಷಕರಾದ ಉನ್ನಿಕೃಷ್ಣನ್ ದಂಪತಿಗಳನ್ನು ಆಡ್ವಾಣಿ ಅವರು ಸನ್ಮಾಸಿ, ಗೌರವಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ಯುವಪೀಳಿಗೆಯಲ್ಲಿ ದೇಶಭಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ. ಭಯೋತ್ಪಾದನಾ ಷಡ್ಯಂತ್ರವನ್ನು ಬಗ್ಗುಬಡಿಯಲು ನಾವು ಪಣತೊಡಬೇಕಾಗಿದೆ ಎಂದರು.

ಭಯೋತ್ಪಾದನಾ ಜಾಗೃತಿ ಅಭಿಯಾನಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿರುವುದಕ್ಕೆ ಪರೋಕ್ಷವಾಗಿ ಉತ್ತರ ನೀಡಿದ ಅವರು, ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಸರಕಾರ ಬದ್ದವಾಗಿದೆ ಎಂದು ಹೇಳಿದರು.

ಭಯೋತ್ಪಾದನೆಯನ್ನು ಹೊಡೆದೋಡಿಸುವಲ್ಲಿ ಯುವಶಕ್ತಿ ಜಾಗೃತವಾಗಬೇಕಾಗಿದೆ. ಯುವಶಕ್ತಿಯಲ್ಲಿ ದೇಶಭಕ್ತಿ ಇದೆ ಎಂಬುದಕ್ಕೆ ಇಂದು ನಡೆದ ಸಮಾರಂಭವೇ ಸಾಕ್ಷಿ ಎಂದು ಪೇಜಾವರ ಮಠಾಧೀಶರಾದ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ತಿಳಿಸಿದರು.
ಭಕ್ತಿ-ಶಕ್ತಿಗಳ ಸಮನ್ವಯಕಾರನಾಗಿರುವ ವೀರ ಆಂಜನೇಯನಂತೆ ನಾವೆಲ್ಲ ಭಯೋತ್ಪಾದನೆ ವಿರುದ್ಧ ಹೋರಾಡಬೇಕಾಗಿದೆ ಎಂದ ಅವರು, ನಮ್ಮೆಲ್ಲರ ಜೀವನ ಹಸಿ ಕಟ್ಟಿಗೆಯ ಬೆಂಕಿಯಂತಾಗದೆ, ಸುತ್ತಲೂ ಪ್ರಕಾಶಮಾನ ಬೀರುವ ಪ್ರಜ್ವಲಿಸುವ ಬೆಂಕಿಯಾಗಬೇಕು ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಬಾಲಗಂಗಾಧರನಾಥೇಶ್ವರ ಸ್ವಾಮೀಜಿ, ಸಂಸದ ಅನಂತಕುಮಾರ್, ಸಚಿವರಾದ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಮಚಂದ್ರೇಗೌಡ, ಅರವಿಂದ ಲಿಂಬಾವಳಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಸಾರಿಗೆ ಸಚಿವ ಆರ್. ಅಶೋಕ್ ಅವರು, ನೆರೆದಿದ್ದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈಸೂರು ಪಾಲಿಕೆ: 8ಸದಸ್ಯರು 'ಕೈ' ಬಿಟ್ಟು ಬಿಜೆಪಿಗೆ
ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ
ರವಿ ಪೂಜಾರಿ ಸಹಚರರ ಬಂಧನ
ಲೋಕಾಯುಕ್ತ ಹೆಗ್ಡೆ-ಬಿ.ಜಯಶ್ರೀಗೆ ಡಾಕ್ಟರೇಟ್
ಪಬ್ ದಾಳಿ: ಶ್ರೀರಾಮಸೇನೆಯ ಇಬ್ಬರು ಗಡಿಪಾರು
ಪಬ್ ದಾಳಿ: ನಿರ್ಮಲಾ ವೆಂಕಟೇಶ್‌‌ಗೆ 'ಗೇಟ್‌ಪಾಸ್'