ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿ ನಡೆಸುವುದು ಭಾರತೀಯ ಸಂಸ್ಕೃತಿಯಲ್ಲ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ ನಡೆಸುವುದು ಭಾರತೀಯ ಸಂಸ್ಕೃತಿಯಲ್ಲ: ಆಡ್ವಾಣಿ
ಶ್ರೀರಾಮಸೇನೆ ವಿರುದ್ಧ ಆಡ್ವಾಣಿ ಕಿಡಿನುಡಿ
PTI
ಕಳೆದ ತಿಂಗಳು ಮಂಗಳೂರಿನ ಪಬ್‌‌ಗೆ ಶ್ರೀರಾಮಸೇನೆ ಸೇನೆ ದಾಳಿ ನಡೆಸಿ, ಯುವತಿಯರ ಮೇಲೆ ಹಲ್ಲೆ ನಡೆಸಿರುವುದನ್ನು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ತೀವ್ರವಾಗಿ ಖಂಡಿಸಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದಲ್ಲಿ ಭಯೋತ್ಪಾದನಾ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಬ್‌ನಲ್ಲಿ ಯುವತಿಯರ ಮೇಲೆ ಶ್ರೀರಾಮಸೇನೆ ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ಯಾರೂ ಬೆಂಬಲಿಸಬಾರದು, ಭಾರತೀಯ ಸಂಸ್ಕೃತಿ ಹಿಂಸೆಯನ್ನು ಮಾಡುವುದಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಬದುಕಲು ಅವಕಾಶ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಬ್‌ನಲ್ಲಿ ಯುವತಿಯರ ಮೇಲೆ ಶ್ರೀರಾಮಸೇನೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ ಆಡ್ವಾಣಿ, ಈ ಬಗ್ಗೆ ಯಾವುದೇ ಸಂಧಾನ ಇಲ್ಲ, ಭಾರತೀಯ ಸಂಸ್ಕೃತಿಗೆ ಅಪವಾದದ್ದು, ಈ ಕ್ರಮ ಶುದ್ಧ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಬ್‌ಗಳಲ್ಲಿ ಅಶ್ಲೀಲ, ಅಕ್ರಮವಾಗಿ ಏನಾದರು ನಡೆಯುತ್ತಿದೆ ಎಂಬುದನ್ನು ಗಮನಿಸಿದರೆ ಆ ಬಗ್ಗೆ ಬೇರೆ ತೆರನಾದ ಕ್ರಮ ಅನುಸರಿಸಬೇಕೆ ವಿನಃ ದಾಳಿ ನಡೆಸುವುದಲ್ಲ ಎಂದು ಸಲಹೆ ನೀಡಿದರು.

ಯುವಕ-ಯುವತಿಯರು ಅವರ ವೈಯಕ್ತಿಕ ದಾರಿಯಲ್ಲಿ ಸಾಗುತ್ತಿರುತ್ತಾರೆ, ಅದಕ್ಕೆ ನೀವು ಅಂಕಿತ ಹಾಕಬೇಕಾಗಿಲ್ಲ, ಆದರೆ ಅಂತಹವರನ್ನು ಕಂಡಲ್ಲಿ ದಾಳಿ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ಆಡ್ವಾಣಿ ಶ್ರೀರಾಮಸೇನೆಯನ್ನು ತರಾಟೆಗೆ ತೆಗೆದುಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕಾರದಿಂದ ಲೋಕಾಯುಕ್ತರಿಗೆ 'ಅಂಕುಶ'
ಕಾಂಗ್ರೆಸ್‌‌ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ: ಆಡ್ವಾಣಿ
ಮೈಸೂರು ಪಾಲಿಕೆ: 8ಸದಸ್ಯರು 'ಕೈ' ಬಿಟ್ಟು ಬಿಜೆಪಿಗೆ
ರಾಜ್ಯದ್ದು ಮಕ್ಮಲ್ ಟೋಪಿ ಬಜೆಟ್: ಕುಮಾರಸ್ವಾಮಿ
ರವಿ ಪೂಜಾರಿ ಸಹಚರರ ಬಂಧನ
ಲೋಕಾಯುಕ್ತ ಹೆಗ್ಡೆ-ಬಿ.ಜಯಶ್ರೀಗೆ ಡಾಕ್ಟರೇಟ್