ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಸರತ್ತು ಆರಂಭಿಸಿದ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶನಿವಾರ ನಡೆದ ಕ್ಷೇತ್ರವಾರು ಸಮಾಲೋಚನಾ ಸಭೆಯಲ್ಲಿ ಕೋಲಾರದ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರು ಪರಸ್ಪರ ಧಿಕ್ಕಾರದ ಘೋಷಣೆ ಕೂಗಿದರಲ್ಲದೇ,ಕೈಕೈ ಮಿಲಾಯಿಸಿದ ಘಟನೆ ನಡೆಯಿತು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ ಬೆಂಬಲಿಗರು ಪರಸ್ಪರ ಬ್ರೋಕರ್‌ಗಳು ಎಂಬ ಆರೋಪಗಳನ್ನು ಮಾಡಿಕೊಂಡರು. ಸುಧಾಕರ್ ಅವರನ್ನು ಬಿಜೆಪಿ ಬ್ರೋಕರ್ ಎಂದು ಕೆ.ಎಚ್.ಮುನಿಯಪ್ಪ ಬೆಂಬಲಿಗರು ಆರೋಪಿಸಿದರೆ, ಕೆ.ಎಚ್.ಮುನಿಯಪ್ಪ ಜೆಡಿಎಸ್ ಬ್ರೋಕರ್ ಎಂದು ಸುಧಾಕರ ಬೆಂಬಲಿಗರು ಆರೋಪಿಸಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಗುಲಾಂ ನಬಿ ಆಜಾದ್ ಈ ಘಟನೆಯನ್ನು ಖುದ್ದು ವೀಕ್ಷಿಸಿ ಸಿಟ್ಟಿನಿಂದ ಸಭೆಯನ್ನು ಅಲ್ಲಿಗೆ ನಿಲ್ಲಿಸಿ ಭಾನುವಾರಕ್ಕೆ ಮುಂದೂಡಿದ್ದಾರೆ. |