ಸಂಪಂಗಿ ಲಂಚ ಸ್ವೀಕಾರ ಪ್ರಕರಣ ಕುರಿತಂತೆ ಶಾಸಕರ ಭವನವನ್ನು ವಿಧಾನಸೌಧದ ವ್ಯಾಪ್ತಿಗೆ ಸೇರಿಸುವ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರ ರೂಲಿಂಗ್ ಕುರಿತಂತೆ ಲೋಕಾಯುಕ್ತ ಹೆಗ್ಡೆ ಅವರ ಅಸಮಾಧಾನದ ಬಗ್ಗೆ ನಾನು ತಲೆಹಾಕೋಲ್ಲ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಗರದ ಕೆ.ಆರ್.ಪುರಂನಲ್ಲಿ ಭಾನುವಾರ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರ ರೂಲಿಂಗ್ ಬಗ್ಗೆ ನೋ ರಿಯಾಕ್ಷನ್ ಎಂದರು. ಈ ವಿಚಾರ ಸಭಾಧ್ಯಕ್ಷರಿಗೆ ಬಿಟ್ಟಿದ್ದು ಎಂದಷ್ಟೇ ಹೇಳಿದರು.ಕನಕಪುರ ಸಂಸದೆ ತೇಜಸ್ವಿನಿ ಅವರು ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆಗೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. |