ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಮೃತಮಹೋತ್ಸಕ್ಕೆ ಅದ್ದೂರಿ ಚಾಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೃತಮಹೋತ್ಸಕ್ಕೆ ಅದ್ದೂರಿ ಚಾಲನೆ
NRB
ಎಲ್ಲಿ ನೋಡಿದರೂ ಜನಸಾಗರ, ಮುಗಿಲು ಮುಟ್ಟುವ ಕೇಕೆ, ಸಂಭ್ರಮದ ನಡುವೆ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದ್ದೂರಿ ಚಾಲನೆ ನೀಡಿದರು.

ಚಿತ್ರೋದ್ಯಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಮೃತ ಭವನ ನಿರ್ಮಾಣಕ್ಕೆ ಸರ್ಕಾರ 5 ಕೋಟಿ ರೂಪಾಯಿ ಸರ್ಕಾರ. ಪೈರಸಿ ಹಾವಳಿ ತಡೆಯಲು ಸರ್ಕಾರ ಶೀಘ್ರ ಹೊಸ ನೀತಿ ರೂಪಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಭಾರತದ ಸುಪ್ರಸಿದ್ಧ ಚಿತ್ರನಟ ಡಾ| ಕಮಲ ಹಾಸನ್ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಾವು ತಮಿಳಿನಲ್ಲಿ ಬರೆದುಕೊಂಡು ಬಂದಿದ್ದ ಭಾಷಣವನ್ನು ಕನ್ನಡದಲ್ಲಿ ಓದಿದರು.

ಕಲೆ ಎಂಬ ಶಾಂತ, ನಿರ್ಮಲ ಕೊಳಕ್ಕೆ ರಾಜಕೀಯದ ಕಲ್ಲೆಸೆಯಬೇಡಿ. ಈ ಪುಷ್ಕರಣಿಯನ್ನು ರಕ್ತದ ಮಡುವನ್ನಾಗಿ ಮಾಡಬೇಡಿ ಎಂದು ತಮ್ಮ ಕಾವ್ಯಾತ್ಮಕ ಶೈಲಿಯ ಭಾಷಣದ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.

ರಾಜಕೀಯ ಲಾಭಕ್ಕಾಗಿ ಕೆಲವರು ಕನ್ನಡಿಗರು ಮತ್ತು ತಮಿಳರ ನಡುವಿನ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ. ಇದರ ದುಷ್ಪರಿಣಾಮ ಕಲೆ ಎಂಬ ತಿಳಿ ನೀರಿನ ಕೊಳದಲ್ಲಿ ಪುಣ್ಯ ಸ್ನಾನ ಮಾಡುತ್ತಿರುವ ಉಭಯ ಭಾಷಿಗ ಕಲಾವಿದರ ಮೇಲಾಗುತ್ತದೆ. ದಯವಿಟ್ಟು ಈ ಕುಟುಂಬವನ್ನು ಒಡೆಯಬೇಡಿ ಎಂದು ಕಮಲ ಹಾಸನ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಹುಭಾಷಾ ತಾರೆಯರು, ಕನ್ನಡ ಚಿತ್ರರಂಗದ ದಿಗ್ಗಜರು, ರಾಜಕೀಯ ಧುರೀಣರು ಭಾಗವಹಿಸಿದ್ದರು.
5.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ನಿರೂಪಣೆ ಮಾಡುತ್ತಿದ್ದ ಸಾ.ರಾ.ಗೋವಿಂದು ಪೂರ್ವತಯಾರಿ ಇಲ್ಲದ್ದರಿಂದ ಅನೇಕ ಆಭಾಸಗಳನ್ನು ಮಾಡಿಕೊಂಡರು. ಕಾರ್ಯಕ್ರಮದ ಸಂಯೋಜಕರು ತಮ್ಮ ಕುಟುಂಬ ವರ್ಗಕ್ಕೆ ಸೀಟು ಮಾಡಿಕೊಡುವಲ್ಲಿ ಬಿಜಿಯಾಗಿದ್ದರು. ಕೆಲವೊಮ್ಮೆ ಮಾಧ್ಯಮದ ಮಂದಿಯ ಸೀಟು ಕೀಳುವ ಪ್ರಯತ್ನಕ್ಕೂ ಕೈ ಹಾಕಿದರು.

ರವಿಚಂದ್ರನ್ ಅವರ ನೇತೃತ್ವದಲ್ಲಿ ನಡೆದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. 15 ದಿವಸಗಳಿಂದ ಕಲಾವಿದರು ನಡೆಸಿದ ತಾಲೀಮಿನ ಶ್ರಮ ಎದ್ದು ಕಾಣುತಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಭಾಧ್ಯಕ್ಷರ ರೂಲಿಂಗ್-ನೋ ರಿಯಾಕ್ಷನ್: ಯಡಿಯೂರಪ್ಪ
ದಂಡಿನೊಂದಿಗೆ ಬರುವೆ-ತಾಕತ್ತಿದ್ದರೆ ತಡೆಯಿರಿ: ಮುತಾಲಿಕ್
ಶೀಘ್ರವೇ ರೇಸ್ ಕೋರ್ಸ್ ಸ್ಥಳಾಂತರ: ಯಡಿಯೂರಪ್ಪ
ನೂತನ ಕೈಗಾರಿಕಾ ನೀತಿಗೆ ಸಂಪುಟ ಅಸ್ತು
ಅಮೃತ ಮಹೋತ್ಸವಕ್ಕೆ ಇಂದು ಚಾಲನೆ
ಆಜಾದ್ ಎದುರೇ ಕಾಂಗ್ರೆಸ್ಸಿಗರ ಹೊಯ್‌‌ಕೈ !