ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳುವ ವ್ಯಕ್ತಿ ಎಂದು ಟೀಕಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಜಾತಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.
3ಬಿ ಪ್ರವರ್ಗದಲ್ಲಿ ಎಲ್ಲ ಲಿಂಗಾಯತರೂ ಇದ್ದಾರೆ. ಉಪಜಾತಿಗಳೂ ಒಳಗೊಂಡಿದೆ. ಇವರಿಗೆಲ್ಲ ಶೇ.5 ರಷ್ಟು ಮೀಸಲಾತಿಯನ್ನು ನನ್ನ ಅಧಿಕಾರದಲ್ಲೇ ನೀಡಿದ್ದೇನೆ. ಆದರೀಗ ಯಡಿಯೂರಪ್ಪನವರು ಹೊಸದೆಂಬಂತೆ 3 ಬಿ ಬಗ್ಗೆ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಜನರನ್ನು ವಂಚಿಸುವ ಗಿಮಿಕ್ ಎಂದರು.
ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ. ಆದರೂ ಮುಖ್ಯಮಂತ್ರಿ, ಅವರಿಗೆ ಅದನ್ನು ಕೊಡುತ್ತೇನೆ, ಇವರಿಗೆ ಇದನ್ನು ಕೊಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಜಾತಿ ಹೆಸರಿನಲ್ಲಿ ಜನರಿಗೆ ಹೆಚ್ಚು ಕಾಲ ಮೋಸ ಮಾಡಲು ಆಗುವುದಿಲ್ಲ. ಒಂದಲ್ಲ ಒಂದು ದಿನ ಯುವ ಪೀಳಿಗೆಗೆ ಸತ್ಯ ಗೊತ್ತಾಗುತ್ತದೆ. ಆಗ ಅವರು ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. |