ರಾಜ್ಯದಲ್ಲಿ ಆಡಳಿತ ನಡೆಸಿದ ಹಿಂದಿನ ಸರಕಾರಗಳು ನಗರದ ಅಭಿವೃದ್ದಿಯನ್ನು ಕಡೆಗಣಿಸಿದ ಕಾರಣ ಇಲ್ಲಿನ ನಾಗರಿಕರು ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಈಗ ಮಾಡುತ್ತಿರುವ ಕಾಮಗಾರಿಗಳನ್ನು ಈ ಮೊದಲೇ ಇದ್ದ ಸರಕಾರಗಳು ಮಾಡಿದ್ದರೆ ವೆಚ್ಚವೂ ಕಡಿಮೆಯಾಗುತಿತ್ತು. ಜತೆಗೆ ನಾಗರಿಕರಿಗೆ ಹೆಚ್ಚಿನ ಉಪಯೋಗವೂ ಆಗುತ್ತಿತ್ತು. ಈ ಮೊದಲು ಕೇವಲ 25 ಲಕ್ಷ ರೂಪಾಯಿಗಳಲ್ಲಿ ಆಗುತ್ತಿದ್ದ ಕಾಮಗಾರಿಗಳಿಗೆ ಈಗ ಒಂದು ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 9 ತಿಂಗಳಿನಿಂದ ಅಭಿವೃದ್ದಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಕಾಮಗಾರಿಗಳು ವೇಗವಾಗಿ ಸಾಗುವಂತೆ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಸಿಎಂ ಹೇಳಿದರು. |