ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೋಷಿತರ ಪರ ಧ್ವನಿ ಎತ್ತಿದ್ದು ವಚನ ಸಾಹಿತ್ಯ: ಸಬೀಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೋಷಿತರ ಪರ ಧ್ವನಿ ಎತ್ತಿದ್ದು ವಚನ ಸಾಹಿತ್ಯ: ಸಬೀಹ
ವೈದಿಕ ಧರ್ಮದ ವಿರುದ್ಧ ಧ್ವನಿ ಎತ್ತುವ ಮೂಲಕ, ಜನವಿರೋಧಿಯಾದ ಸಂಸ್ಕೃತಿಯನ್ನು ಧಿಕ್ಕರಿಸಿ ಜನಪರ ಸಂಸ್ಕೃತಿಯನ್ನು ಕಟ್ಟುವಲ್ಲಿ 12ನೇ ಶತಮಾನದ ವಚನಕಾರರು ಬಹುಮುಖ್ಯ ಪಾತ್ರವಹಿಸಿರುವುದಾಗಿ ಮಂಗಳೂರು ವಿಶ್ವವಿದ್ಯಾಲಯದ ಡಾ.ಸಬೀಹ ಭೂಮಿಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮದರಾಸು ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಮ್ಮಿಕೊಂಡ ಎರಡು ದಿನಗಳ 'ಶಾಸ್ತ್ರೀಯ ಭಾಷೆಗಳ ವೈಶಿಷ್ಟ್ಯ' ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನವಾದ ಶುಕ್ರವಾರ ವಚನ ಸಾಹಿತ್ಯದ ಸಾಂಸ್ಕೃತಿಕ ವೈಶಿಷ್ಟ್ಯದ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದರು.

ಶರಣ ಸಂಸ್ಕೃತಿ ಸಮಾಜದ ಅಂಚಿನಲ್ಲಿರುವ ದೀನರ, ಶೋಷಿತರ ಪರ ಧ್ವನಿ ಎತ್ತಿ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಮೆರೆದಿದೆ ಎಂದರು.

ವಚನ ಸಾಹಿತ್ಯದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಎರಡು ನೆಲೆಗಳಲ್ಲಿ ವಿಮರ್ಶಿಸಲು ಯತ್ನಿಸುವುದಾಗಿ ಹೇಳಿದ ಅವರು, ಮೊದಲನೆಯದಾಗಿ 12ನೇ ಶತಮಾನದ ಹಿನ್ನೆಲೆ ಹಾಗೂ 21ನೇ ಶತಮಾನದಲ್ಲಿ ಅದರ ಸಿಂಹಾವಲೋಕನ ಮಾಡಿಕೊಳ್ಳುವುದು. ಆರಂಭದಲ್ಲಿ ಪುರೋಹಿತಶಾಹಿ ವಿರುದ್ಧ ಧ್ವನಿ ಎತ್ತಿದ್ದು ಬೌದ್ಧ ಮತ್ತು ಜೈನ ಧರ್ಮ. ಅಸಮಾನತೆಯ ವಿರುದ್ಧ ಕಹಳೆ ಮೊಳಗಿಸಿ ಅಸಂಖ್ಯಾತ ಶೋಷಿತರಿಗೆ ಬಿಡುಗಡೆಯ ಅವಕಾಶ ಮಾಡಿಕೊಟ್ಟ ಧರ್ಮಗಳಾಗಿದ್ದವು.

ಮಹಿಳೆಯರಿಗೆ ಉನ್ನತ ಅವಕಾಶ ಕಲ್ಪಿಸಿಕೊಟ್ಟ ಧರ್ಮ ಕೂಡ ಬೌದ್ದ ಧರ್ಮ ಮುಖ್ಯವಾದದ್ದು, ಕುಟುಂಬದಲ್ಲೇ ಇದ್ದು ಹೊರಹೋಗುವ ಅವಕಾಶ ಹಾಗೂ ಅವಿವಾಹಿತರಾಗಿ ಇರುವಂತಹ ಮುಕ್ತ ಸ್ವಾತಂತ್ರ್ಯ ನೀಡಿತ್ತು. ಅಲ್ಲದೇ ವಿಧವೆಗೆ ಮರುವಿವಾಹದ ಹಾಗೂ ವೈರಾಗ್ಯದ ಅವಕಾಶ ನೀಡಿತ್ತು. ಅದೇ ರೀತಿಯಲ್ಲಿ 12ನೇ ಶತಮಾನದ ವಚನಕಾರರು ಕೂಡ ಕರ್ಮಠತನವನ್ನು ವಿರೋಧಿಸಿ ಜನಪರ ಸಂಸ್ಕೃತಿಯೊಂದನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅದೇ ರೀತಿ 21ನೇ ಶತಮಾನದತ್ತ ಹೊರಳು ನೋಟ ಹರಿಸಿದಾಗ, 80ರ ದಶಕ ತುಂಬಾ ಮಹತ್ವದೆನಿಸುತ್ತದೆ ಎಂದ ಸಬೀಹಾ, ದಲಿತ, ಮುಸ್ಲಿಂ ಸೇರಿದಂತೆ ಹಲವು ಸ್ತರಗಳ ಜನ ತಮ್ಮ ನೋವಿನ ಧ್ವನಿಗಳನ್ನು ದಾಖಲಿಸಲು ಸಾಧ್ಯವಾದದ್ದು ಈ ಸಂದರ್ಭದಲ್ಲಿ ಎಂದರು. ಆದರೆ 12ನೇ ಶತಮಾನದಲ್ಲಿ ನಡೆದಷ್ಟು ಪ್ರಖರವಾದ ಸಂಚಲನೆ 80ರ ದಶಕದಲ್ಲಿ ಮೂಡಿ ಬಂದಿಲ್ಲ. ಶರಣ ಸಾಹಿತ್ಯ ಮುಖ್ಯವಾಗಿ ಅದು ಜನಮುಖಿ ವಿಚಾರಗಳಿಂದ ಜನಸಾಮಾನ್ಯರನ್ನೂ ತನ್ನತ್ತ ಆಕರ್ಷಿಸಿತ್ತು.

ವಚನಕಾರರಿಗಿಂತ ಮೊದಲು ಹೆಣ್ಣನ್ನು "ಮಾಯೆ''ಎಂಬ ದೃಷ್ಟಿಯಿಂದ ಬಿಂಬಿಸಿ ಆಕೆಯನ್ನು ಪುರುಷ ಪ್ರಧಾನವಾಗಿ ಬಂಧಿಸಿಡುವ ಕಾರ್ಯವನ್ನು ವ್ಯವಸ್ಥಿತವಾಗಿಯೇ ಮಾಡಲಾಗಿತ್ತು. ಆ ಮಾಯೆಯ ದೃಷ್ಟಿಕೋನವನ್ನು ದಿಕ್ಕರಿಸಿದವರು ವಚನಕಾರರು. 'ಉಂಡು ಉಪವಾಸಿ-ಬಳಸಿ ಬ್ರಹ್ಮಚಾರಿ'ಎಂಬಂತಹ ಬೂಟಾಟಿಕೆಯ ಜೀವನ ಸ್ತರವನ್ನು ಶರಣರು ತಿರಸ್ಕರಿಸಿ, ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರುವ ಮೂಲಕ ಮಹಿಳೆಯ ಧ್ವನಿಗೊಂದು ಬೆಲೆ ನೀಡಿದರು.

ದೇಶರೂಪಿ ಸಂಸ್ಕೃತಿಯೊಂದನ್ನು ವಿರೋಧಿಸುವ ಮನಸ್ಸುಗಳು ಅಧಿಕವಾಗಿದ್ದ ಸಂದರ್ಭದಲ್ಲಿಯೇ ಬಸವಣ್ಣನವರು ಸಮಾಜ ನಿರ್ಮಿತ ತಾರತಮ್ಯ, ನಿರಾಕರಣೆ ಅಸ್ಪ್ರಶ್ಯತೆಗಳನ್ನೆಲ್ಲಾ ವಿರೋಧಿಸಿ ಜನಸಾಮಾನ್ಯರಲ್ಲಿ ಪ್ರಶ್ನಿಸುವ ಮನೋಭಾವವನ್ನು ಹುಟ್ಟು ಹಾಕಿ ಹೊಸತೊಂದು ಕ್ರಾಂತಿಯನ್ನೇ ಮಾಡಿದರು ಎಂಬುದನ್ನು ಗಮನಿಸಬೇಕು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾ.12ಕ್ಕೆ ತೃತೀಯ ರಂಗಕ್ಕೆ ಚಾಲನೆ: ದೇವೇಗೌಡ
ಯಲಹಂಕ ರಸ್ತೆಗೆ ಮೇ.ಸಂದೀಪ್ ಹೆಸರು: ಸಿಎಂ
ಸರಕಾರಕ್ಕೆ ಯಾರ ಸರ್ಟಿಫಿಕೇಟ್ ಬೇಡ: ಯಡಿಯೂರಪ್ಪ
ಅಭಿವೃದ್ದಿ ಕುಂಠಿತಕ್ಕೆ ಹಿಂದಿನ ಸರಕಾರಗಳ ನಿರ್ಲಕ್ಷ್ಯ ಕಾರಣ: ಸಿಎಂ
ಕಾಂಗ್ರೆಸ್ ಅವನತಿಗೆ ಡಿಕೆಶಿ ಕಾರಣ: ಯೋಗೇಶ್ವರ್
ವಜಾದ ಹಿಂದೆ ರಾಜಕೀಯ ಪಿತೂರಿ ಇದೆ: ನಿರ್ಮಲಾ