ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎರಡು ಘಟಕಗಳು ಕೈಕೊಟ್ಟಿರುವ ಕಾರಣ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಭಾನುವಾರದಿಂದಲೇ ಎಲ್ಲೆಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರಮಾಣ ಹೆಚ್ಚಾಗಿದೆ.
ತಾಂತ್ರಿಕ ತೊಂದರೆಗಳಿಂದಾಗಿ ಆರ್‌ಟಿಪಿಎಸ್‌ನ ಒಂದು ಮತ್ತು ಮೂರನೇ ಘಟಕಗಳು ಶನಿವಾರ ರಾತ್ರಿಯಿಂದಲೇ ಸ್ಥಗಿತಗೊಂಡಿದೆ. ಹೀಗಾಗಿ ಸುಮಾರು 300 ಮೆಗಾವಾಟ್‌ನಷ್ಟು ವಿದ್ಯುತ್ ಖೋತಾ ಆಗಿದೆ. ಕೊರತೆ ಪ್ರಮಾಣ ಹೆಚ್ಚಾಗಿರುವ ಕಾರಣ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂದು ಉನ್ನತ ಮೂಲಗಳು ದೈನಿಕವೊಂದಕ್ಕೆ ತಿಳಿಸಿವೆ.
ಭಾನುವಾರ ಮತ್ತು ಸೋಮವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಆಗಿಂದಾಗ್ಗೆ ವಿದ್ಯುತ್ ವ್ಯತ್ಯಯ ಮಾಮೂಲಿಯಾಗಿದೆ. ಬೇಸಿಗೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ವಿದ್ಯುತ್ ಅಭಾವವೂ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಆದರೆ ಈಶ್ವರಪ್ಪ ಮಾತ್ರ ಛತ್ತೀಸ್‌ಗಢದಿಂದ ಪೂರೈಕೆಯಾಗುತ್ತಿರುವ ವಿದ್ಯುತ್ ಶೀಘ್ರದಲ್ಲಿಯೇ ಸ್ಥಗಿತಗೊಳ್ಳುವ ಸಂಭವವಿದೆ ಎಂದು ಶನಿವಾರವಷ್ಟೇ ತಿಳಿಸಿದ್ದರು. |