ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದು ವೋಟ್ ಬ್ಯಾಂಕ್ ಸೃಷ್ಟಿ ಮಾಡಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂದು ಸಮಾಜದವರನ್ನು ಎಚ್ಚರಿಸಲು, ಸಮಾಜವನ್ನು ಅಪಾಯದಿಂದ ಪಾರು ಮಾಡಲು ಧರ್ಮ ರಕ್ಷಾ ಮಂಚ್ ಸಂಘಟನೆ ಮೂಲಕ ದೇಶಾದ್ಯಂತ ಸಮಾಜೋತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ಇದು ಪಕ್ಷಾತೀತವಾಗಿದ್ದು, ದೇಶದ ಎಲ್ಲ ಮಠಾಧೀಪತಿಗಳು ಇದರ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.ಕೆಲವು ರಾಜಕೀಯ ಪಕ್ಷಗಳು ಬೇರೆ ಧರ್ಮವನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರನ್ನು ಹಿಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಇದರ ವಿರುದ್ಧ ಹಿಂದುಗಳೆಲ್ಲ ಜಾಗೃತಗೊಂಡು ಹಿಂದು ವೋಟ್ ಬ್ಯಾಂಕ್ ಸೃಷ್ಟಿ ಮಾಡುವ ಕೆಲಸ ಆಗಬೇಕು ಎಂದು ಪೇಜಾವರ ಶ್ರೀ ಹೇಳಿದ್ದಾರೆ.ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಸಂಘ ಪರಿವಾರ ಒಂದಕದ್ಕೊಂದು ಸಂಬಂಧ ಹೊಂದಿದೆ. ಆದರೆ ಶ್ರೀ ರಾಮ ಸೇನೆಗೂ ಈ ಸಂಘಟನೆಗಳಿಗೂ ಸಂಬಂಧವಿಲ್ಲ ಎಂದರು. |