ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವರ್ಣರಂಜಿತ ಅಮೃತಮಹೋತ್ಸವಕ್ಕೆ ತೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಣರಂಜಿತ ಅಮೃತಮಹೋತ್ಸವಕ್ಕೆ ತೆರೆ
ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಕೊನೆಯ ದಿನವಾದ ಮಂಗಳವಾರ ಅನೇಕ ಉತ್ತಮ ಅಂಶಗಳಿಗೆ ವೇದಿಕೆಯಾಯಿತು.ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ನಿಮಾಪಕರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಚರ್ಚೆ ಕೇವಲ ಮಾತಿನ ಮನೆಯಾಗಲಿಲ್ಲ. ಅಲ್ಲಿ ವ್ಯಕ್ತವಾದ ಉತ್ತಮ ಅಂಶಗಳನ್ನು ದಾಖಲಿಸಿ ಮಂಡಳಿಯಿಂದ ಮತ್ತು ಸರಕಾರದಿಂದ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಘೋಷಿಸಲಾಯಿತು.

ಮೂರು ವರ್ಷಗಳಿಂದೀಚೆಗೆ ಚಿತ್ರರಂಗದ ಯಾವುದೇ ಸಮಾರಂಭಗಳು ನಡೆದರೂ ಡಾ.ರಾಜ್ ಕುಮಾರ್ ಬಗ್ಗೆ ಮಾತನಾಡುತ್ತೇವೆ. ಆದರೆ ಯಾರಾದರೂ ಅವರ ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರಾ? ಇಲ್ಲ. ರಾಜ್ ಕುಮಾರ್ ಕಾಲದಲ್ಲಿ ಯಾವ ನಿರ್ಮಾಪಕರೂ ತೊಂದರೆ ಅನುಭವಿಸಲಿಲ್ಲ.

ಆದರೀಗ ಸ್ಟಾರ್ ಗಿರಿ ಹೊತ್ತ ನಿರ್ಮಾಪಕರಿಗೆ ಸಂಭಾವನೆ ಕೊಡುವುದೇ ಕಷ್ಟವಾಗಿದೆ. ಚಿತ್ರದ ಬಜೆಟ್‌‌ನಲ್ಲಿ ಕಥೆಗಿಂತರ ಇತರ ಖರ್ಚಿಗೇ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಇದೇ ಸವಾಲಾಗಿ ಕಾಡುತ್ತಿದೆ ಎಂದು ಕೆ.ಎಸ್.ಎಲ್.ಸ್ವಾಮಿ ಹೇಳಿದರು.

ರಾಜೇಂದ್ರ ಸಿಂಗ್ ಬಾಬು, ರಾಜ್ಯದಲ್ಲಿ ಇನ್ನೂ ನಾಲ್ಕುವರೆ ಕೋಟಿ ಜನರಿಗೆ ಸಿನಿಮಾ ಮುಟ್ಟಿಸಲು ಸಾಧ್ಯವಾಗಿಲ್ಲ. ಕಾರಣ ನಮ್ಮಲ್ಲಿ ಮಾರುಕಟ್ಟೆ ಕೌಶಲ್ಯಗಳು ಇಲ್ಲದಿರುವುದು. ಸರಕಾರ ನೀಡಿದ ತೆರಿಗೆ ವಿನಾಯಿತಿ ಪರಾಮರ್ಶಿಸಬೇಕು. ಕನ್ನಡದಲ್ಲಿ 3 ಸಿನಿಮಾ ನಿರ್ಮಿಸಿದ ನಿರ್ಮಾಪಕನಿಗೆ ಮಾತ್ರ ತೆರಿಗೆ ವಿನಾಯಿತಿ ನೀಡಬೇಕು. ಮುಂದಿನ 6 ತಿಂಗಳಲ್ಲಿ ಆರಂಭವಾಗುವ ಮಲ್ಟಿಪ್ಲೆಕ್ಸ್‌‌ಗಳಲ್ಲಿ ಎರಡು ಪ್ರದರ್ಶನ ಕನ್ನಡದ್ದಾಗಿರಬೇಕೆಂಬ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಚಲನಚಿತ್ರ ಪೈರಸಿಯಲ್ಲಿ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ಭಾಗವಹಿಸಿರುವುದು ಕಂಡು ಬರುತ್ತಿದೆ. ಇದರಿಂದ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾ.ರಾ.ಗೋವಿಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಅಧಿಕಾರಕ್ಕೇರಿದರೆ ಪೋಟಾ ಜಾರಿ: ವೆಂಕಯ್ಯ ನಾಯ್ಡು
ನೀತಿ ಸಂಹಿತೆ ಬಗ್ಗೆ ಪೊಲೀಸರಿಗೆ ತರಬೇತಿ
ಅಪರಾಧಿಗಳ ಸ್ಪರ್ಧೆಗೆ ಅವಕಾಶವಿಲ್ಲ: ಚು. ಆಯೋಗ
ಅಮೃತಮಹೋತ್ಸವಕ್ಕೆ ಇಂದು ತೆರೆ
ಆಡ್ವಾಣಿಗೆ ಪ್ರಧಾನಿ ಯೋಗ್ಯತೆ ಇಲ್ಲ: ದೇಶಪಾಂಡೆ
ಯಡಿಯೂರಪ್ಪ ಸರ್ವಜ್ಞ: ದೇವೇಗೌಡ ಟೀಕೆ