ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಲಬೆರಕೆ ರಾಗಿ: ಶಾಸಕರಿಂದ ಅಹೋರಾತ್ರಿ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಲಬೆರಕೆ ರಾಗಿ: ಶಾಸಕರಿಂದ ಅಹೋರಾತ್ರಿ ಪ್ರತಿಭಟನೆ
ಮಧ್ಯವರ್ತಿಗಳಿಂದ ಕಲಬೆರಕಿ ರಾದಿ ಖರೀದಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದಾಗಿ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಶಾಸಕರು ಗೋದಾಮಿಗೆ ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆದ ಘಟನೆ ಅರಸಿಕೆರೆಯಲ್ಲಿ ನಡೆದಿದೆ.

ಅರಸಿಕೆರೆಯ ಗೋದಾಮಿನಲ್ಲಿ ಕೂಡಿಟ್ಟ 85ಟನ್ ರಾಗಿಯಲ್ಲಿ ಕಲಬೆರಕೆ ಇರುವುದನ್ನು ಪತ್ತೆ ಹಚ್ಚಿದ್ದ ಸ್ಥಳೀಯರು ಶಾಸಕ ಶಿವಲಿಂಗೇಗೌಡ, ಹಾಗೂ ತಹಸೀಲ್ದಾರ್ ಅವರ ನೆರವಿನೊಂದಿಗೆ ದಾಳಿ ನಡೆಸಿದಾಗ ಈ ಅಕ್ರಮ ಬಯಲಾಗಿತ್ತು. ರಾಗಿ ಚೀಲದಲ್ಲಿ ಕಲ್ಲು, ಮಣ್ಣು, ಪ್ಲ್ಯಾಸ್ಟಿಕ್‌ಗಳನ್ನು ಕಲಬೆರಕೆ ಮಾಡಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ರಾಗಿ ಖರೀದಿಯಲ್ಲಿನ ಕೋಟ್ಯಂತರ ರೂಪಾಯಿ ಅವ್ಯವಹಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಶಿವಲಿಂಗೇಗೌಡರು ಗ್ರಾಮಸ್ಥರೊಂದಿಗೆ ಮಂಗಳವಾರ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ರಾತ್ರಿಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಹೋರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿರುವ ಶಾಸಕರು ತಮ್ಮ ಪಟ್ಟು ಸಡಿಲಿಸದೆ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಸ್ಥಳಕ್ಕೆ ಸಚಿವರು ಭೇಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿ ವಿಚಾರದಲ್ಲಿ ಗೌಡರು ರಾಜಕೀಯ ಮಾಡ್ತಿದ್ದಾರೆ: ಸಿಎಂ
ವರ್ಣರಂಜಿತ ಅಮೃತಮಹೋತ್ಸವಕ್ಕೆ ತೆರೆ
ಬಿಜೆಪಿ ಅಧಿಕಾರಕ್ಕೇರಿದರೆ ಪೋಟಾ ಜಾರಿ: ವೆಂಕಯ್ಯ ನಾಯ್ಡು
ನೀತಿ ಸಂಹಿತೆ ಬಗ್ಗೆ ಪೊಲೀಸರಿಗೆ ತರಬೇತಿ
ಅಪರಾಧಿಗಳ ಸ್ಪರ್ಧೆಗೆ ಅವಕಾಶವಿಲ್ಲ: ಚು. ಆಯೋಗ
ಅಮೃತಮಹೋತ್ಸವಕ್ಕೆ ಇಂದು ತೆರೆ