ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಸ ಸಾಹಿತ್ಯದ್ದು ಮೌಖಿಕ ಪರಂಪರೆ: ನಾವಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಸ ಸಾಹಿತ್ಯದ್ದು ಮೌಖಿಕ ಪರಂಪರೆ: ನಾವಡ
ಸರಳ ಸಂಕೀರ್ತನೆ ಮೂಲಕ ಮಠ-ಮಾನ್ಯಗಳ ಮೌಢ್ಯಗಳನ್ನು ಲೇವಡಿ ಮಾಡುವ ಮೂಲಕ ಬೆಳೆದು ಬಂದ ದಾಸ ಸಾಹಿತ್ಯ ಅದೊಂದು ಮೌಖಿಕ ಪರಂಪರೆಯ ಸಾಹಿತ್ಯ. ಅವರ ಉದ್ದೇಶ ಹೊಸ ಸಮಾಜ ನಿರ್ಮಾಣದ್ದಾಗಿರಲಿಲ್ಲ, ಬದುಕಿನ ಪುನರುತ್ಥಾನ ಪ್ರಮುಖವಾಗಿತ್ತು ಎಂದು ಮಂಗಳೂರು ಥಿಯೋಲಾಜಿಕಲ್ ರೀಸರ್ಚ್ ಸೆಂಟರ್‌‌ನ ಪ್ರೊ.ಎ.ವಿ.ನಾವಡ ಅವರು ಹೇಳಿದರು.

ಅವರು ಮದರಾಸು ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಮ್ಮಿಕೊಂಡ ಎರಡು ದಿನಗಳ 'ಶಾಸ್ತ್ರೀಯ ಭಾಷೆಗಳ ವೈಶಿಷ್ಟ್ಯ' ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನ 'ದಾಸ ಸಾಹಿತ್ಯದ ಸಾಂಸ್ಕೃತಿಕ ವಿಶಿಷ್ಟತೆ' ಕುರಿತು ಉಪನ್ಯಾಸ ನೀಡುತ್ತ ಮಾತನಾಡುತ್ತಾ, ದಾಸ ಸಾಹಿತ್ಯ ವ್ಯಾಪಕ ಚಳವಳಿಯಾಗಿ ಬೆಳೆದು ಬಂದಿತ್ತು, ವಿಪರ್ಯಾಸವೆಂದರೆ ಅದನ್ನು ಒಂದು ಸಮುದಾಯದ ಸಾಹಿತ್ಯ ಎಂಬ ತಪ್ಪು ಗ್ರಹಿಕೆಯೇ ಹೆಚ್ಚಾಗಿ ಬೆಳೆದು ಬಂದಿದೆ ಎಂದು ವಿಷಾಧಿಸಿದರು.

ಸಾಹಿತ್ಯದ ಅಧ್ಯಯನಕಾರರು ಕೂಡ ಆ ಪರಿಧಿಯನ್ನು ಬಿಟ್ಟು ಹೊರ ಹೋಗದೆ, ದಾಸ ಸಾಹಿತ್ಯ ಒಂದು ಸಮುದಾಯವನ್ನು ದೃಷ್ಟಿ ಇಟ್ಟುಕೊಂಡೇ ವಿಶ್ಲೇಷಿಸಲಾಯಿತು. ದಾಸರ ಪದ ಇಂದಿಗೂ ಭಜನೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿರುವುದು ದುರಂತ ಎಂದರು. ದಾಸ ಸಾಹಿತ್ಯದಲ್ಲಿ ವಿಶ್ವಮಾನವೀಯತೆ, ತತ್ವ ವಿವೇಚನೆ, ಸಮುದಾಯದ ಚಳವಳಿ ಮೂಲಕ ಹರಿದಾಸ ಸಾಹಿತ್ಯ ಬೆಳೆದು ಬಂದಿದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ದಾಸ ಸಾಹಿತ್ಯ ಪರಂಪರೆಗೆ ಮಧ್ವಾಚಾರ್ಯರು ಪ್ರೇರಕರಲ್ಲ, ನರಹರಿದಾಸ, ಶ್ರೀಪಾದರಾಜರಿಂದಲೇ ದಾಸ ಸಾಹಿತ್ಯ ಆರಂಭವಾಯಿತು ಎಂಬುದು ಮುಖ್ಯ. ತಮಿಳುನಾಡಿನ ದೇವಾಲಯಗಳಲ್ಲಿ ಕೀರ್ತನೆಗಳನ್ನು ಹಾಡಿಸುತ್ತಿದ್ದರು. ಆದರೆ ಆರಂಭದಲ್ಲಿ ದಾಸರ ಪದಗಳನ್ನು ಹಾಡಲು ಮಠಗಳಲ್ಲಿ ವಿರೋಧವಿತ್ತು, ಬಳಿಕ ದಾಸ ಸಾಹಿತ್ಯ ಕೂಡ ಜನಸಾಮಾನ್ಯರನ್ನು ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿತ್ತು. ವ್ಯಾಸರಾಯರ ಕಾಲದಿಂದಲೂ ದಾಸ ಸಾಹಿತ್ಯ ಬೆಳೆದು ಬಂದು, ಅವರು ಇಬ್ಬರು ಸಾಂಸ್ಕೃತಿಕ ನಾಯಕರನ್ನು ಈ ನಾಡಿಗೆ ನೀಡಿದ್ದಾರೆ, ಅವರೇ ಕನಕದಾಸ ಮತ್ತು ಪುರಂದರದಾಸ.

ಆಗಿನ ಕಾಲದ ಪಂಡಿತರನ್ನು, ಮಠಮಾನ್ಯಗಳನ್ನು, ಮಡಿವಂತರನ್ನು ಕನಕದಾಸರು ತಮ್ಮ ಪದಗಳ ಮೂಲಕ ಲೀಲಾಜಾಲವಾಗಿ ವಿರೋಧಿಸಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ರಾಯಚೂರಿನಲ್ಲಿ ಮುಸ್ಲಿಂ ಸಮುದಾಯದ ರಾಮದಾಸರು 780 ಕೀರ್ತನೆಗಳನ್ನು ಹಾಡಿದ್ದರು. ಅವೆಲ್ಲವೂ ಮೌಖಿಕವಾಗಿತ್ತೇ ವಿನಃ, ಬರಹ ರೂಪದ್ದಾಗಿರಲಿಲ್ಲ, ಆ ಕಾರಣಕ್ಕಾಗಿಯೇ ಹಲವಾರು ಮಹಿಳೆಯರು ದಾಸ ಸಾಹಿತ್ಯವನ್ನು ರಚಿಸಿದ್ದರು ಕೂಡ ಅವರನ್ನು ಸಮರ್ಥವಾಗಿ ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ನಾವಡರು ವಿಷಾದ ವ್ಯಕ್ತಪಡಿಸಿದರು. ಭಕ್ತಿಗಿಂತ ಜ್ಞಾನ ದೊಡ್ಡದು ಎಂಬ ತತ್ವದೊಂದಿಗೆ ಹೋರಾಡಿದ ದಾಸರು ತಳಮಟ್ಟದ ಸಮುದಾಯಗಳ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಥಾನಮಾನಕ್ಕಾಗಿ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ
ಕಲಬೆರಕೆ ರಾಗಿ: ಶಾಸಕರಿಂದ ಅಹೋರಾತ್ರಿ ಪ್ರತಿಭಟನೆ
ಗಣಿ ವಿಚಾರದಲ್ಲಿ ಗೌಡರು ರಾಜಕೀಯ ಮಾಡ್ತಿದ್ದಾರೆ: ಸಿಎಂ
ವರ್ಣರಂಜಿತ ಅಮೃತಮಹೋತ್ಸವಕ್ಕೆ ತೆರೆ
ಬಿಜೆಪಿ ಅಧಿಕಾರಕ್ಕೇರಿದರೆ ಪೋಟಾ ಜಾರಿ: ವೆಂಕಯ್ಯ ನಾಯ್ಡು
ನೀತಿ ಸಂಹಿತೆ ಬಗ್ಗೆ ಪೊಲೀಸರಿಗೆ ತರಬೇತಿ