ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾಗುತ್ತಿದೆ: ನಂಜಾವಧೂತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾಗುತ್ತಿದೆ: ನಂಜಾವಧೂತ
ಸರಕಾರದಲ್ಲಿ ವೀರ ಶೈವರಿಗೆ ಸಿಗುತ್ತಿರುವ ಪ್ರಾಮುಖ್ಯತೆ ಉಳಿದ ಜಾತಿ ಜನಾಂಗಗಳಿಗೆ ಸಿಗುತ್ತಿಲ್ಲ ಎಂದು ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಆರೋಪಿಸಿದ್ದಾರೆ.

ಬಜೆಟ್‌‌ನಲ್ಲಿ ಸಣ್ಣಪುಟ್ಟ ಜಾತಿಗಳಿಗೆ 30 ಕೋಟಿ ರೂಪಾಯಿ ಹಣವನ್ನು ಹಂಚಿಕೆ ಮಾಡಲಾಗಿದೆ. ಆದರೆ 110 ಕೋಟಿ ರೂಪಾಯಿ ಅನುದಾನವನ್ನು ವೀರಶೈವ ಸಮಾಜದ ಎಲ್ಲಾ ಪಂಗಡಗಳಿಗೆ ಹುಡುಕಿ ಹುಡುಕಿ ಕೊಟ್ಟಿದ್ದಾರೆ. ವಿಧಾನಸೌಧದೊಳಗೆ ನಮ್ಮ ಜನಾಂಗದ ಮುಖಂಡರು ಈ ಬಗ್ಗೆ ಪ್ರಶ್ನಿಸಬೇಕಾಗಿದೆ ಎಂದರು.

ಇದೇ ರೀತಿ ಮುಂದುವರಿದರೆ ನಾವು ಒಕ್ಕಲಿಗರು ಎಂದು ಹೇಳಿಕೊಳ್ಳುವುದಕ್ಕೂ ನಮ್ಮ ಜನ ಭಯಪಡುವ ವಾತಾವರಣ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕನಸು ಕಾಣುತ್ತಾ ಮಲಗಿದ್ದೇವೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಅಲ್ಪ ಸಂಖ್ಯಾತರಾಗಬೇಕಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಒಗ್ಗಟ್ಟು ಹಾಗೂ ಸಾಮರಸ್ಯದ ಕೊರತೆಯಿಂದಾಗಿ ಒಕ್ಕಲಿಗ ಸಮಾಜಕ್ಕೆ ಹಿನ್ನಡೆಯಾಗುತ್ತಿದೆ. ಒಕ್ಕಲಿಗ ಸಮಾಜದವರು ಒಗ್ಗಟ್ಟಿನಿಂದಿರಬೇಕಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಪರೇಶನ್ ಕಮಲದ ಹಿಂದೆ ಡಿಕೆಶಿ 'ಕೈ': ತೇಜಸ್ವಿನಿ
ದಾಸ ಸಾಹಿತ್ಯದ್ದು ಮೌಖಿಕ ಪರಂಪರೆ: ನಾವಡ
ಸ್ಥಾನಮಾನಕ್ಕಾಗಿ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ
ಕಲಬೆರಕೆ ರಾಗಿ: ಶಾಸಕರಿಂದ ಅಹೋರಾತ್ರಿ ಪ್ರತಿಭಟನೆ
ಗಣಿ ವಿಚಾರದಲ್ಲಿ ಗೌಡರು ರಾಜಕೀಯ ಮಾಡ್ತಿದ್ದಾರೆ: ಸಿಎಂ
ವರ್ಣರಂಜಿತ ಅಮೃತಮಹೋತ್ಸವಕ್ಕೆ ತೆರೆ