ರಾಜ್ಯದಲ್ಲಿ ವಿದ್ಯುತ್ ಅಭಾವಕ್ಕೆ ದೂರದೃಷ್ಟಿ ಇಲ್ಲದೇ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆಪಾದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿದ್ಯುತ್ ಕೊರತೆಯನ್ನು ನೀಗಿಸಲು ಸರಕಾರ ಬೇರೆ ರಾಜ್ಯದಿಂದ 6900 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಅವರು ಇಲ್ಲಿನ ಯಲಬುರ್ಗಾದಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರೈತರು, ಮಹಿಳೆಯರು, ಬಡವರು ಹಾಗೂ ಹಿಂದುಳಿದ ಜನಾಂಗದ ಅಭ್ಯುದಯಕ್ಕಾಗಿಯೇ ಇರುವ ಬಿಜೆಪಿ ಸರಕಾರವು ರಾಜ್ಯದ ಜನತೆಗೆ ವಿದ್ಯುತ್ತಿನ ಅಗತ್ಯವನ್ನು ಮನಗಂಡು ಛತ್ತೀಸ್‌ಗಡದಲ್ಲಿ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಂಡಿದೆ ಎಂದರು.
ಮುಂದಿನ ದಿನಗಳಲ್ಲಿ ಅಧಿಕಾರಿಗಳು, ಸಚಿವರು, ಶಾಸಕರು ಮನೆ,ಮನೆಗೆ ತೆರಳಿ ಅನರ್ಹರು ಪಡೆದಿರುವ ಪಡಿತರ ಕಾರ್ಡ್‌ಗಳನ್ನು ವಶಪಡಿಸಿಕೊಂಡು ಅರ್ಹರಿಗೆ ಕಾರ್ಡ್ ನೀಡುವುದಷ್ಟೇ ಅಲ್ಲ, ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಆಹಾರ ಧಾನ್ಯ ವಿತರಿಸದಿದ್ದರೆ ಜೈಲಿಗೆ ಕಳುಹಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. |