ಬೆಂಗಳೂರು ಸರಣಿ ಸ್ಫೋಟದ ರೂವಾರಿ ಓಮನ್‌ನಲ್ಲಿ ಸಿಕ್ಕಿಬಿದಿದ್ದಾನೆ. ಕೇರಳ ಮೂಲದ ಹುರ್ಫರ್ ನವಾಜ್(32) ಎಂಬ ಶಂಕಿತ ಉಗ್ರ ಸೆರೆ ಸಿಕ್ಕ ವ್ಯಕ್ತಿಯಾಗಿದ್ದಾನೆ.
ಈತ ಸಿಮಿ ಕಾರ್ಯಕರ್ತನಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಉತ್ತರ ಪ್ರದೇಶದ ಅಲಿಗಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಈತ ಪಾಕಿಸ್ತಾನದ ಲಷ್ಕರ್ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಹೊರತು ದುಷ್ಕೃತ್ಯಗಳ ಬಗ್ಗೆ ತರಬೇತಿ ಪಡೆದಿಲ್ಲ. ಜಿಹಾದಿ ಬಗ್ಗೆ ಮಂತ್ರ ಜಪ ಮಾಡುವುದೇ ಈತನ ಕೆಲಸವಾಗಿತ್ತು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.
ನವಾಜ್‌ಗೆ ಚಿಕ್ಕ ವಯಸ್ಸಿನಿಂದಲೇ ಸಿಮಿ ಸಂಘಟನೆ ಸಹವಾಸವಿತ್ತು, ಈತನ ಚಿಕ್ಕಪ್ಪ ಒಬ್ಬರು ಸಿಮಿ ಸಂಘಟನೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ನವಾಜ್ ಕೂಡ ಸಿಮಿ ಸಂಘಟನೆಯ ಸಂಪರ್ಕ ಸಾಧಿಸಲು ಸಾಧ್ಯವಾಗಿತ್ತು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |