ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಹಕಾರಿ ಸಂಘಗಳ ಚುನಾವಣೆ ಮುಂದಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಕಾರಿ ಸಂಘಗಳ ಚುನಾವಣೆ ಮುಂದಕ್ಕೆ
ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಈಗಾಗಲೇ ಪ್ರಕಟಿಸಿರುವ ಒಟ್ಟು 6,791 ಸಹಕಾರ ಸಂಘಗಳ ಚುನಾವಣೆ ಮುಂದೂಡುವಂತೆ ಸರಕಾರ ಆದೇಶ ಹೊರಡಿಸಿದೆ.

ಮಾರ್ಚ್ 22ರಿಂದ ಏ.30ರ ಒಳಗೆ ನಡೆಯಬೇಕಾಗಿದ್ದ ವಿವಿಧ ಸಹಕಾರಿ ಸಂಘಗಳ ಚುನಾವಣೆಯನ್ನು ಮೇ ತಿಂಗಳಿಗೆ ಮುಂದೂಡಲಾಗಿದೆ. 3 ಹಂತದ ಸಹಕಾರ ಸಂಘಗಳಿಗೆ ಮೇ, ಜೂನ್, ಜುಲೈನಲ್ಲಿ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ.

ಈ ಪರಿಷ್ಕೃತ ಆದೇಶ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವ ಸಹಕಾರ ಸಂಘಗಳಿಗೂ ಅನ್ವಯಿಸಲಿದೆ. ಹೊಸದಾಗಿ ಚುನಾಯಿತವಾದ ಆಡಳಿತ ಸಮಿತಿಗಳು ಮಾತ್ರ ಮೇಲ್ಮಟ್ಟದ ಸಹಕಾರಿ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಬಹುದಾಗಿದೆ. ಆಡಳಿತ ಸಮಿತಿಗೆ ಚುನಾವಣೆ ನಡೆಯುವವರೆಗೆ ಈಗಿರುವ ಆಡಳಿತ ಸಮಿತಿಗಳೇ ಮುಂದುವರಿಯಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದೇ ವೇಳೆ ನಿಗಮ ಮತ್ತು ಮಂಡಳಿಗಳಿಗೆ ನೇಮಕಗೊಂಡವರಿಗೆ ಈಗ ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡಬಾರದೆಂದು ಚುನಾವಣಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೋಕಸಭೆ, ಸಹಕಾರಿ ಸಂಘ, ಆಯೋಗ, ಸರಕಾರ
ಮತ್ತಷ್ಟು
ಬೆಂಗಳೂರು ಸರಣಿ ಸ್ಫೋಟದ ರೂವಾರಿ ಓಮನ್‌ನಲ್ಲಿ ಸೆರೆ
ನಿರ್ಮಲಾ ವೆಂಕಟೇಶ್‌ ಬಿಜೆಪಿಗೆ ಸೇರ್ಪಡೆ
ಮಾಜಿ ಪ್ರಧಾನಿ ದೇವೇಗೌಡ ಹಾಸನದಿಂದ ಸ್ಪರ್ಧೆ
ತೇಜಸ್ವಿನಿ-ಡಿಕೆಶಿ ಜಟಾಪಟಿ ಹೈಕಮಾಂಡ್ ಗಮನಿಸುತ್ತಿದೆ: ಖರ್ಗೆ
ವಿದ್ಯುತ್ ಕೊರತೆಗೆ ಕಾಂಗ್ರೆಸ್ ಕಾರಣ: ಯಡಿಯೂರಪ್ಪ
ಸಿಎಂ ಕುಟುಂಬ ರಾಜಕಾರಣ: ಬಿಜೆಪಿಯಲ್ಲಿ ಭಿನ್ನಮತ