ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದೆ-ಮುಂದೆ ನೋಡ್ಬೇಡಿ,ಕ್ರಮ ಕೈಗೊಳ್ಳಿ:ವಿದ್ಯಾಶಂಕರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದೆ-ಮುಂದೆ ನೋಡ್ಬೇಡಿ,ಕ್ರಮ ಕೈಗೊಳ್ಳಿ:ವಿದ್ಯಾಶಂಕರ್
WD
ರಾಜಕೀಯ ಪಕ್ಷಗಳು ಅಥವಾ ಚುನಾವಣಾ ಅಭ್ಯರ್ಥಿಗಳು ನಡೆಸುವ ಚುನಾವಣಾ ಪ್ರಚಾರದಿಂದ ಜನಸಾಮಾನ್ಯರಿಗೆ ಯಾವ ತೊಂದರೆಯೂ ಆಗಬಾರದು. ಒಂದು ವೇಳೆ ತೊಂದರೆಯಾದರೆ ಸಂಬಂಧಿಸಿದ ಪಕ್ಷ ಮತ್ತು ಅಭ್ಯರ್ಥಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡಬೇಡಿ ಎಂದು ಮುಖ್ಯಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗುರುವಾರ ಸೂಚಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಗುರುವಾರ ಪೊಲೀಸ್ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಅವರು ಈ ಸೂಚನೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಮಾದರಿ ಎನ್ನಿಸುವಂತೆ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಿದ್ದೆವು. ಈ ಬಾರಿ ಇನ್ನಷ್ಟು ಬಿಗಿಯಾಗಿ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಆಸೆ ಆಮಿಷ ಒಡ್ಡುವವರ ವಿರುದ್ಧವೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಚುನಾವಣಾ ಕಾರ್ಯ ಮಾಡುವ ಪೂಲೀಸರಿಗೆ ಸೂಕ್ತ ತರಬೇತಿ ನೀಡಬೇಕು. ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಹೋಗಬೇಕು ಎಂದು ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೀತಿ ಸಂಹಿತೆ-ಬಿಜೆಪಿ ವಿರುದ್ಧ ದೂರು: ದೇಶಪಾಂಡೆ
ನಕ್ಸಲ್ ನಿಗ್ರಹಕ್ಕೆ ವಿಶೇಷ ಘಟಕ ಅಗತ್ಯ: ಸಿಂಗ್
ಪುತ್ರನಿಗೆ ಟಿಕೆಟ್-ಇದ್ರಲ್ಲಿ ನನ್ನ ಪಾತ್ರ ಇಲ್ಲ: ಯಡಿಯೂರಪ್ಪ
ಸಹಕಾರಿ ಸಂಘಗಳ ಚುನಾವಣೆ ಮುಂದಕ್ಕೆ
ಬೆಂಗಳೂರು ಸರಣಿ ಸ್ಫೋಟದ ರೂವಾರಿ ಓಮನ್‌ನಲ್ಲಿ ಸೆರೆ
ನಿರ್ಮಲಾ ವೆಂಕಟೇಶ್‌ ಬಿಜೆಪಿಗೆ ಸೇರ್ಪಡೆ