ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ಮುಖಂಡರಿಗೆ ಸೂಕ್ತ ಸಮಯದಲ್ಲಿ ಬುದ್ದಿ ಕಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ.
ಸಂಸದೆ ತೇಜಸ್ವಿನಿ ಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದಿತ್ತು. ಇದರಿಂದ ಅವರ ಮತ್ತು ಪಕ್ಷದ ಗೌರವ ಕಡಿಮೆಯಾಗುತ್ತದೆ. ಚಾನೆಲ್ ಮುಂದೆ ಹೇಳಿಕೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಡ ಹಾಕಲು ಲಿಂಗಪ್ಪ ನವದೆಹಲಿಗೆ ಹೋಗಿದ್ದು ತಪ್ಪು, ತೇಜಸ್ವಿನಿ ಗೌಡ ಅವರೂ ಪತ್ರಿಕೆಗಳ ಮೂಲಕ ಹೋಗಬಾರದಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲದ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇರ ಕೈವಾಡ ಇರುವುದಾಗಿ ತೇಜಸ್ವಿನಿ ಗಂಭೀರವಾಗಿ ಆರೋಪ ಮಾಡುವ ಮೂಲಕ ವಿವಾದ ಹುಟ್ಟಿಕೊಂಡಿದೆ. |