ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಡಿಯೂರಪ್ಪ-ಅನಂತ್ ಕುಮಾರ್ ನಡುವೆ ಜಟಾಪಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಡಿಯೂರಪ್ಪ-ಅನಂತ್ ಕುಮಾರ್ ನಡುವೆ ಜಟಾಪಟಿ
ಬಿಜೆಪಿಯೊಳಗೂ ಅಯೋಮಯ ಪರಿಸ್ಥಿತಿ ಉದ್ಭವಿಸಿದೆ. ಲೋಕಸಭೆಯ ಟಿಕೆಟ್ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಅನಂತ್ ಕುಮಾರ್ ನಡುವೆ ಮತ್ತೆ ಅಸಮಾಧಾನ ಭುಗಿಲೆದ್ದಿದೆ.

ಟಿಕೆಟ್ ಹಂಚಿಕೆ ವಿಷಯದಲ್ಲಿ ಬೇಸರಗೊಂಡಿರುವ ಅವರು ಗುರುವಾರ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಿಂದಲೂ ದೂರ ಉಳಿದರು. ಪಕ್ಷದೊಳಗಿನ ಬಿಕ್ಕಟ್ಟು ದಿಲ್ಲಿ ತಲುಪಿದ್ದು ವರಿಷ್ಠ ನಾಯಕರು ಕೂಡಾ ಆತಂಕಗೊಂಡಿದ್ದಾರೆ.

ಪಕ್ಷದ ಹಿರಿಯ ನಾಯಕ ವೆಂಕಯ್ಯನಾಯ್ಡು ಹಾಗೂ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ದೂರವಾಣಿ ಮೂಲಕ ಅನಂತಕುಮಾರ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡಿರುವುದು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದ ಬಸವನಗುಡಿಯಲ್ಲಿರುವ ಅನಂತ್ ಕುಮಾರ್ನಿವಾಸಕ್ಕೆ ಅನೇಕ ಶಾಸಕರು ತೆರಳಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಸೇರಿದಂತೆ ಕೆಲವು ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡ ಪರಿಣಾಮ ಗೊಂದಲ ಮತ್ತಷ್ಟು ಹೆಚ್ಚಿದ್ದು, ಆ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ವರಿಷ್ಠರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುರ್ಖಾ ಧರಿಸಲು ಅಡ್ಡಿ ಸರಿಯಲ್ಲ: ಪ್ರೊ.ಮುಮ್ತಾಜ್
ಪಕ್ಷಕ್ಕೆ 'ಗ್ರೇಡ್‌‌' ಮತದಾರರು ನೀಡ್ತಾರೆ: ಕುಮಾರಸ್ವಾಮಿ
ತೇಜಸ್ವಿನಿ ಬಹಿರಂಗ ಹೇಳಿಕೆ ತಪ್ಪು: ದೇಶಪಾಂಡೆ
ಹಿಂದೆ-ಮುಂದೆ ನೋಡ್ಬೇಡಿ,ಕ್ರಮ ಕೈಗೊಳ್ಳಿ:ವಿದ್ಯಾಶಂಕರ್
ನೀತಿ ಸಂಹಿತೆ-ಬಿಜೆಪಿ ವಿರುದ್ಧ ದೂರು: ದೇಶಪಾಂಡೆ
ನಕ್ಸಲ್ ನಿಗ್ರಹಕ್ಕೆ ವಿಶೇಷ ಘಟಕ ಅಗತ್ಯ: ಸಿಂಗ್