ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವೇಗೌಡರಿಗೆ ಬುದ್ದಿ ಇಲ್ಲ: ಜನಾರ್ದನ ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವೇಗೌಡರಿಗೆ ಬುದ್ದಿ ಇಲ್ಲ: ಜನಾರ್ದನ ರೆಡ್ಡಿ
NRB
ಬುದ್ದಿ ಇಲ್ಲದ ಮಾಜಿ ಪ್ರಧಾನಿ ದೇವೇಗೌಡರು ಬುದ್ದಿಜೀವಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಟೀಕಿಸಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಗಣಿ ಹಾಗೂ ಗಡಿ ವಿಷಯದ ಕುರಿತು ಮಾತನಾಡುವ ನೈತಿಕತೆ ಗೌಡರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಪಕ್ಷ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಅನಗತ್ಯವಾಗಿ ದೇವೇಗೌಡರು ಎಲ್ಲ ವಿಷಯದಲ್ಲಿ ತೆಲೆಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಳ್ಳಾರಿ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ದೇವೇಗೌಡರು ಇಲ್ಲಿನ ಕೆಲ ಜೆಡಿಎಸ್ ರೈತರನ್ನು ಎತ್ತಿಕಟ್ಟಿ ವಿಷಯವನ್ನು ಕಗ್ಗಂಟಾಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ದೇವೇಗೌಡರ ಕನಸು ನನಸಾಗುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಸ್ಥಳದಲ್ಲಿ ವಿಮಾನ ನಿಲ್ದಾಣ ಯೋಜನೆ ಆರಂಭವಾಗಲಿದೆ ಎಂದರು.

ಸುಷ್ಮಾ ಸ್ವರಾಜ್ ಅವರ ಸೂಚನೆ ಮೇರೆಗೆ ಜೆ ಶಾಂತಿ ಅವರನ್ನು ಲೋಕಸಭೆ ಚುನಾವಣೆ ಕಣಕ್ಕಿಸಲು ವರಿಷ್ಠರು ತೀರ್ಮಾನ ಕೈಗೊಂಡಿರುವುದಾಗಿ ಸಮಜಾಯಿಷಿಕೆ ನೀಡಿದರು.

ಬಳ್ಳಾರಿ ವಿಮಾನ ನಿಲ್ದಾಣ ನಾನು ನನ್ನ ಕೈಯಾರೆ ಉದ್ಘಾಟನೆ ಮಾಡುವುದನ್ನು ನೋಡುವವರೆಗಾದರು ದೇವೇಗೌಡರು ಬದುಕಿರುವಂತೆ ಆಯುಷ್ಯ ಕೊಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ರೆಡ್ಡಿ ಟೀಕೆಗೊಳಗಾಗಿದ್ದರು. ಇದೀಗ ದೇವೇಗೌಡರಿಗೆ ಬುದ್ದಿ ಇಲ್ಲ ಎಂಬುದಾಗಿ ಹೇಳಿ ರಾಜಕೀಯ ಕೆಸರೆಚಾಟಕ್ಕೆ ವೇದಿಕೆ ಹಾಕಿಕೊಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸರಸ್' ವಿಮಾನ ದುರಂತ-ಮೂವರು ಸಜೀವ ದಹನ
ಕಾಂಗ್ರೆಸ್ ಭಿನ್ನಮತದಿಂದ ಬಿಜೆಪಿ ಅಧಿಕಾರಕ್ಕೆ: ದೇಶಪಾಂಡೆ
ಖುರೇಶಿ ವಜಾಕ್ಕೆ ಬಿಜೆಪಿ ಕಾರ್ಯಕರ್ತರ ಆಗ್ರಹ
ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷ: ಕುಮಾರಸ್ವಾಮಿ
ನಿಮ್ಮನ್ನು ಯಾಕೆ ತಡಿಬಾರ್ದು: ಮುತಾಲಿಕ್‌‌ಗೆ ನೋಟಿಸ್
ಯಡಿಯೂರಪ್ಪ-ಅನಂತ್ ಕುಮಾರ್ ನಡುವೆ ಜಟಾಪಟಿ