ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬುರ್ಖಾ ವಿರುದ್ಧ ಹೇಳಿಕೆ: ಮುತಾಲಿಕ್ ಕ್ಷಮೆಗೆ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುರ್ಖಾ ವಿರುದ್ಧ ಹೇಳಿಕೆ: ಮುತಾಲಿಕ್ ಕ್ಷಮೆಗೆ ಆಗ್ರಹ
NRB
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ಗೂ ವಿವಾದಕ್ಕೂ ಬಿಡದ ನಂಟು ಎಂಬಂತೆ ಬುರ್ಖಾ ಕುರಿತು ನೀಡಿರುವ ಹೇಳಿಕೆ ಗುಲ್ಬರ್ಗಾದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ತೀವ್ರ ಖಂಡಿಸಿ ಪ್ರತಿಭಟನೆ ನಡೆಸುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವ ಮೂಲಕ ಹಿಂಸೆ ಅನುಭವಿಸುತ್ತಿದ್ದಾರೆ. ಆದರೆ ಧಾರ್ಮಿಕ ಕಟ್ಟುಪಾಡುಗಳಿಂದಾಗಿ ಅವರಿಗೆ ಆ ಅಸಮಾಧಾನವನ್ನು ಹೇಳಿಕೊಳ್ಳಲಾಗುತ್ತಿಲ್ಲ ಎಂದು ಮುತಾಲಿಕ್ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ ತಿಳಿಸಿದ್ದರು.

ಬುರ್ಖಾ ವಿರುದ್ಧದ ಈ ಹೇಳಿಕೆಯನ್ನು ಖಂಡಿಸಿ ಗುಲ್ಬರ್ಗಾದಲ್ಲಿ ಶುಕ್ರವಾರ ಮುಸ್ಲಿಂ ಮಹಿಳೆಯರು ಮುತಾಲಿಕ್ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸಿದರು. ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ಸಾಗಿದ ಮಹಿಳೆಯರು ಮುತಾಲಿಕ್ ವಿರುದ್ಧ ಘೋಷಣೆ ಕೂಗಿದರು.

ಬುರ್ಖಾ ಧರಿಸುವುದು ಇಸ್ಲಾಂ ಧಾರ್ಮಿಕ ನಂಬಿಕೆಯಾಗಿದೆ, ಅದರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ, ಮುತಾಲಿಕ್ ಅವರ ಹೇಳಿಕೆಯಿಂದ ನಮಗೆ ನೋವಾಗಿದೆ, ಅವರು ಕ್ಷಮೆ ಯಾಚಿಸಲೇಬೇಕು ಎಂದು ಪ್ರತಿಭಟನಾಕಾರ ಮಹಿಳೆಯರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರಿಗೆ ಬುದ್ದಿ ಇಲ್ಲ: ಜನಾರ್ದನ ರೆಡ್ಡಿ
'ಸರಸ್' ವಿಮಾನ ದುರಂತ-ಮೂವರು ಸಜೀವ ದಹನ
ಕಾಂಗ್ರೆಸ್ ಭಿನ್ನಮತದಿಂದ ಬಿಜೆಪಿ ಅಧಿಕಾರಕ್ಕೆ: ದೇಶಪಾಂಡೆ
ಖುರೇಶಿ ವಜಾಕ್ಕೆ ಬಿಜೆಪಿ ಕಾರ್ಯಕರ್ತರ ಆಗ್ರಹ
ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷ: ಕುಮಾರಸ್ವಾಮಿ
ನಿಮ್ಮನ್ನು ಯಾಕೆ ತಡಿಬಾರ್ದು: ಮುತಾಲಿಕ್‌‌ಗೆ ನೋಟಿಸ್