ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ: ದೇವೇಗೌಡರಿಂದ ರಾಜ್ಯಪಾಲರಿಗೆ ದೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ: ದೇವೇಗೌಡರಿಂದ ರಾಜ್ಯಪಾಲರಿಗೆ ದೂರು
NRB
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ನಿಯೋಗ ಒಂದು ರಾಜ್ಯಪಾಲರ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಗಡಿಯನ್ನು ಬಳ್ಳಾರಿ ಗಣಿ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ ಎಂದು ದೂರು ಸಲ್ಲಿಸಿದೆ. ಈ ಕುರಿತು ರಾಷ್ಟ್ರಪತಿಗಳಿಗೂ ದೂರು ನೀಡಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ವಿಚಾರವನ್ನು ಪ್ರಧಾನವಾಗಿ ಅಸ್ತ್ರವಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ, ರಾಜ್ಯಪಾಲರ ಬಳಿ ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದ್ದು, ಅವರು ತಮ್ಮ ದೂರಿಗೆ ಸಕಾರಾತ್ಮಕ ಸ್ಪಂದನ ತೋರಿದ್ದಾರೆ ಎಂದು ತಿಳಿಸಿದ್ದಾರೆ.

"ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರಿಂದ ಗಡಿ ಕಬಳಿಕೆ ನಡೆದಿದ್ದು, ರಾಜ್ಯದ ಏಕತೆ, ಸಮಗ್ರತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆಯ ಮೂಲಕ ಆಂಧ್ರ ಮುಖ್ಯಮಂತ್ರಿ ಪುತ್ರ ಮತ್ತು ಜನಾರ್ದನ ರೆಡ್ಡಿ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ" ಎಂದು ಗೌಡರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ರಾಜ್ಯದ 36 ಕಿ.ಮೀ ಉದ್ದದ ಗಡಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಈ ಗಡಿ ಕಬಳಿಕೆಯನ್ನು ನಿಲ್ಲಿಸಬೇಕು ಎಂದು ಗೌಡರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು ಸ್ಫೋಟ: ಸಿಮಿ ಉಗ್ರನ ಬಂಧನ
ಚು.ಆಯೋಗಕ್ಕೆ ಮಾಹಿತಿ ನೀಡಿ, ಹಣ ಮಾಡಿ
ಗುಂಡು ಹಾರಾಟಕ್ಕೆ ಹೇತುವಾದ ಚುಡಾವಣೆ
ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಬೇಕಿಲ್ಲ: ಸಿಎಂ
ಸ್ಫರ್ಧಿ ರಾಘು ಅಲ್ಲ, ಅಪ್ಪ ಯಡಿಯೂರಪ್ಪ: ಬಂಗಾರಪ್ಪ
ನಾನಲ್ಲ, ಭದ್ರತಾ ಸಭೆ ರದ್ದು ಮಾಡಿದ್ದು ಚಿದು: ಸಿಎಂ