ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಣದ ಹೊಳೆ ಹರಿಸಲಿರುವ ಮಹಾಸಮರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದ ಹೊಳೆ ಹರಿಸಲಿರುವ ಮಹಾಸಮರ
ಲೋಕಸಭೆ ಚುನಾವಣೆ ಘೋಷಣೆಯಾಗಿದೆ. 'ಕಾಸಿದ್ದೋನೇ ಬಾಸು' ಎಂಬಂತೆ ದುಡ್ಡು ಹಾಗೂ ಬೆಂಬಲ ಇದ್ದವರಿಗೆ ಸೀಟು ಲಭಿಸಿದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಯ ಜೇಬಿನಲ್ಲಿ ಕನಿಷ್ಠ ಎಂಟು ಕೋಟಿ ರೂ. ಇರಬೇಕು ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಲಿದೆ. ರಾಜ್ಯ ಗುಪ್ತಚರ ಇಲಾಖೆ ನಡೆಸಿದ ಪೂರ್ವ ಅಂದಾಜಿನ ಪ್ರಕಾರ ಕರ್ನಾಟಕದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರ, ದಕ್ಷಿಣ, ಉತ್ತರ ಮತ್ತು ಕೇಂದ್ರ ವಲಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣದ ಹೊಳೆ ಹರಿಯಲಿದೆ.

ಬೆಂಗಳೂರು ವಲಯದಲ್ಲಿ ಅಭ್ಯಥಿಯೊಬ್ಬನ ಖರ್ಚು 3 ರಿಂದ 3.5 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಚುನಾವಣೆ ಕಾವೇರುತ್ತಿದ್ದಂತೆ ಈ ಮೊತ್ತವೂ ಏರಬಹುದು. ಧುರೀಣರು ಮತ್ತು ಹಳೆಯ ತಲೆಗಳನ್ನು ಬಿಟ್ಟರೆ ಒಂದು ಟಿಕೆಟ್‌ಗೆ ಕನಿಷ್ಠ 5 ಕೋಟಿ ರೂ. ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ. ಅಂದಾಜು ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಚುನಾವಣೆಗಾಗಿ ಖರ್ಚಾಗಬಹುದಾದ ಒಟ್ಟು ಮೊತ್ತ 300 ಕೋಟಿ.

2008ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಖರ್ಚು ಮಾಡಿದವರು ಬಿಜೆಪಿ ಅಭ್ಯರ್ಥಿಗಳು. ಇವರಲ್ಲಿ ಕೆಲವರು ಈಗ ಅಧಿಕಾರದ ಗದ್ದುಗೆ ಏರಿದ್ದಾರೆ. ಒಬ್ಬ ಕನಿಷ್ಠ 15 ಕೋಟಿ ರೂ. ಖರ್ಚು ಮಾಡಿದ್ದರು ಎಂದು ಹೇಳಲಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿ: ದೇವೇಗೌಡರಿಂದ ರಾಜ್ಯಪಾಲರಿಗೆ ದೂರು
ಬೆಂಗಳೂರು ಸ್ಫೋಟ: ಸಿಮಿ ಉಗ್ರನ ಬಂಧನ
ಚು.ಆಯೋಗಕ್ಕೆ ಮಾಹಿತಿ ನೀಡಿ, ಹಣ ಮಾಡಿ
ಗುಂಡು ಹಾರಾಟಕ್ಕೆ ಹೇತುವಾದ ಚುಡಾವಣೆ
ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ಕೊಡಬೇಕಿಲ್ಲ: ಸಿಎಂ
ಸ್ಫರ್ಧಿ ರಾಘು ಅಲ್ಲ, ಅಪ್ಪ ಯಡಿಯೂರಪ್ಪ: ಬಂಗಾರಪ್ಪ