ವಿದೇಶಿ ಪ್ರವಾಸಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಂಗಳೂರು ಮೂಲದವನೆಂದು ತಿಳಿಯಲಾಗಿದ್ದು, ಬೆಂಗಳೂರಿನ ಕಾಲೇಜು ವಿದ್ಯಾರ್ಥಿ ಶರಣಬಸವರಾಜ್ ಎಂದು ತಿಳಿದು ಬಂದಿದೆ. ಈತ ಗೋಕರ್ಣದ ಪ್ಯಾರಡೈಸ್ ಬೀಚ್ನಲ್ಲಿ ಈ ಕೃತ್ಯ ಎಸಗಿದ್ದಾನೆ ಏನ್ನಲಾಗಿದೆ.
ಆಸ್ಟ್ರೇಲಿಯನ್ ಮೂಲದ ಮಹಿಳೆಯೆಂದು ತಿಳಿದು ಬಂದಿದ್ದು, ಈ ಪ್ರಕರಣದ ಕುರಿತು ಮಹಿಳೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಮೂರು ದಿನದ ನ್ಯಾಯಂಗ ಬಂಧನಕ್ಕೆ ಆದೇಶ ಹೊರಡಿಸಿದೆ. |