ಕೇಂದ್ರದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ಬರುವ ಮೂಲಕ, ಎಲ್.ಕೆ.ಅಡ್ವಾಣಿಯವರನ್ನು ಪ್ರಧಾನಿಯನ್ನಾಗಿ ಮಾಡುವುದು ಮತ್ತು ತಮ್ಮ ಪುತ್ರ ರಾಘವೇಂದ್ರ ಸಂಸತ್ ಸದಸ್ಯನಾಗಲು ಸಹಾಯ ಮಾಡುವುದು ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಅವರು ಅಭ್ಯರ್ಥಿಯ ಭವಿಷ್ಯ ನಿರ್ಧರಿಸುವಲ್ಲಿ ಮತ್ತು ಅಭ್ಯರ್ಥಿಗಳು ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗುವುಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಕರೆ ನೀಡಿದ್ಹಾರೆ. ರಾಜ್ಯ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದೂ ಅವರು ಭವಿಷ್ಯ ನುಡಿದರು.ಚುನಾವಣೆ ಮುಗಿಯುವ ತನಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಟೀಕೆಗಳಿಗೆ ಮೌನವಾಗಿರುತ್ತೇನೆ ಎಂದು ಅವರು ಹೇಳಿದರು. ತಾವು ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಸಹಾಯ ಮಾಡಿರುವ ಕ್ರಮಗಳ ಕುರಿತಂತೆ ಅಪಪ್ರಚಾರ ಮಾಡುತ್ತಿರುವ ಬಂಗಾರಪ್ಪ ಜನರಲ್ಲಿ ಕೋಮು ಉದ್ವಿಗ್ನತೆ ಮೂಡಿಸುತ್ತಿದ್ದಾರೆಂದೂ ಅವರು ಆರೋಪಿಸಿದರು.ಬಂಗಾರಪ್ಪ ಟೀಕೆ: ತಮ್ಮದೇ ಜಾತಿಯ ಹಲವು ಧಾರ್ಮಿಕ ಸಂಸ್ಥೆಗಳಿಗೆ ಮತ್ತು ತಮ್ಮ ಕ್ರಮಗಳನ್ನು ಬೆಂಬಲಿಸುವ ಇತರೆ ಕೆಲವು ಮಠಮಾನ್ಯಗಳಿಗೆ ತೆರಿಗೆದಾರರ ಬೃಹತ್ ಮೊತ್ತವನ್ನು ಹಂಚಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿ ರಾಜಕಾರಣ ಮಾಡುತ್ತಿದ್ದಾರೆಂದು ಬಂಗಾರಪ್ಪ ಆರೋಪಿಸಿದ್ದಾರೆ. |