ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಾರ್ಟಿ ಮೇಲೆ ದಾಳಿ: 110 ಅರೆ ನಗ್ನರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾರ್ಟಿ ಮೇಲೆ ದಾಳಿ: 110 ಅರೆ ನಗ್ನರ ಬಂಧನ
ನಗದರ ಹೊರವಲಯದ ದೊಡ್ಡಆಲದಮರದ ಸಮೀಪ ನಡೆಯುತ್ತಿದ್ದ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ರಾಮನಗರ ಪೊಲೀಸರು ಮದ್ಯ ಸೇವಿಸಿ ಅರೆನಗ್ನ ಸ್ಥಿತಿಯಲ್ಲಿದ್ದ 110 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ಸಮಯದಲ್ಲಿ ನಗದು, 23 ಕಾರುಗಳು, ಅಪಾರ ಪ್ರಮಾಣದ ಮದ್ಯ ಹಾಗೂ ಸಂಗೀತ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಇದು ರೇವ್ ಪಾರ್ಟಿ ಅಲ್ಲ. ಅಬಕಾರಿ ಕಾಯ್ದೆಯ ಉಲ್ಲಂಘನೆ, ಅರೆನಗ್ನ ದೇಹ ಪ್ರದರ್ಶನ ಪ್ರಕರಣವಿದು ಎಂದು ಅವರು ಹೇಳುತ್ತಾರೆ. ಆದರೆ ಸ್ಥಳೀಯರು ಹಾಗೂ ಕಾರ್ಯಕ್ರಮವನ್ನು ವೀಕ್ಷಿಸಿದವರು ಇದು ರೇವ್ ಪಾರ್ಟಿ. ಇಲ್ಲಿ ಮಾದಕ ವಸ್ತುಗಳನ್ನು ಮದ್ಯದಲ್ಲಿ ಮಿಶ್ರಣ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ನಶೆ ಏರಿಸಿಕೊಳ್ಳುವುದು ರೂಢಿಯಲ್ಲಿದೆ ಎಂದು ಹೇಳತ್ತಾರೆ. ಹಾಗೂ ಇದನ್ನು ಹಣಕ್ಕಾಗಿ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸುತ್ತಾರೆ.

ಚುಂಚನಕುಪ್ಪೆ-ದೊಡ್ಡ ಆಲದಮರ ನಡುವೆ ಇರುವ ಪದ್ಮಫಾರ್ಮ್ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಮಾಹಿತಿ ತಿಳಿದು ಅಲ್ಲಿಗೆ ದಾಳಿ ನಡೆಸಿದ ಪೊಲೀಸರು ಮೋಜಿನಲ್ಲಿ ತೊಡಗಿದ್ದ ಯುವಕ ಯುವತಿಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಸಿಕ್ಕಿಬಿದ್ದಿರುವ ಯುವಕ-ಯುವತಿಯರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದು, ಕಾಲ್ಸೆಂಟರ್ ಹಾಗೂ ಸಾಫ್ಟ್ವೇರ್ ಉದ್ಯೋಗಿಗಳು ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪುತ್ರನನ್ನು ಸಂಸದನನ್ನಾಗಿಸುವುದೇ ಗುರಿ: ಸಿಎಂ
5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ಮಹಿಳೆ
ನೀತಿ ಸಂಹಿತೆ ಉಲ್ಲಂಘನೆ: ಮಾಹಿತಿ ಕೇಳಿದ ಆಯೋಗ
ಸಹಕಾರ ಸಚಿವರ ರಾಜೀನಾಮೆಗೆ ಆಗ್ರಹ
ಗೋಕರ್ಣದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ
ದೇಶಪಾಂಡೆಯವರಿಂದ ಸಿಎಂ ತರಾಟೆ