ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ನಗರದ ಹೊರವಲಯದ ಹೊರವಲಯದಲ್ಲಿ ನಡೆಯುತ್ತಿದ್ದ ಪಾರ್ಟಿಯ ವೇಳೆ ಬಂಧಿತರಾಗಿರುವ ಎಲ್ಲರಿಗೂ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ.

ವಿದೇಶಿಯರೂ ಸೇರಿದಂತೆ 100ಕ್ಕಿಂತಲೂ ಅಧಿಕ ಮಂದಿ ಭಾನುವಾರ ಮುಂಜಾನೆ ಬಂಧನಕ್ಕೀಡಾಗಿದ್ದರು. ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಖಚಿತ ಮಾಹಿತಿಯಾಧಾರದಲ್ಲಿ ಪೊಲೀಸರು ಪಾರ್ಟಿಯ ಮೇಲೆ ದಾಳಿ ನಡೆಸಿದ್ದರು.

ಘಟನೆಯ ಹಿನ್ನೆಲೆ
ದೊಡ್ಡಆಲದಮರದ ಸಮೀಪ ನಡೆಯುತ್ತಿದ್ದ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ ರಾಮನಗರ ಪೊಲೀಸರು ಮದ್ಯ ಸೇವಿಸಿ ಅರೆನಗ್ನ ಸ್ಥಿತಿಯಲ್ಲಿದ್ದ ಸುಮಾರು 100ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಿದ್ದಾರು. ದಾಳಿ ಸಮಯದಲ್ಲಿ ನಗದು, 23 ಕಾರುಗಳು, ಅಪಾರ ಪ್ರಮಾಣದ ಮದ್ಯ ಹಾಗೂ ಸಂಗೀತ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಇದು ರೇವ್ ಪಾರ್ಟಿ ಅಲ್ಲ. ಅಬಕಾರಿ ಕಾಯ್ದೆಯ ಉಲ್ಲಂಘನೆ, ಅರೆನಗ್ನ ದೇಹ ಪ್ರದರ್ಶನ ಪ್ರಕರಣವಿದು ಎಂದು ಅವರು ಹೇಳುತ್ತಾರೆ. ಆದರೆ ಸ್ಥಳೀಯರು ಹಾಗೂ ಕಾರ್ಯಕ್ರಮವನ್ನು ವೀಕ್ಷಿಸಿದವರು ಇದು ರೇವ್ ಪಾರ್ಟಿ. ಇಲ್ಲಿ ಮಾದಕ ವಸ್ತುಗಳನ್ನು ಮದ್ಯದಲ್ಲಿ ಮಿಶ್ರಣ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ನಶೆ ಏರಿಸಿಕೊಳ್ಳುವುದು ರೂಢಿಯಲ್ಲಿದೆ ಎಂದು ಹೇಳತ್ತಾರೆ. ಹಾಗೂ ಇದನ್ನು ಹಣಕ್ಕಾಗಿ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸುತ್ತಾರೆ.

ಚುಂಚನಕುಪ್ಪೆ-ದೊಡ್ಡ ಆಲದಮರ ನಡುವೆ ಇರುವ ಪದ್ಮಫಾರ್ಮ್ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಮಾಹಿತಿ ತಿಳಿದು ಅಲ್ಲಿಗೆ ದಾಳಿ ನಡೆಸಿದ ಪೊಲೀಸರು ಮೋಜಿನಲ್ಲಿ ತೊಡಗಿದ್ದವರನ್ನು ಬಂಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೃತೀಯ ರಂಗದ ಸಮಾವೇಶಕ್ಕೆ ಸಾಕಷ್ಟು ಬಸ್ಸಿಲ್ಲ?
ಬಂಗಾರಪ್ಪ ನಾಲಿಗೆಯನ್ನು ಕತ್ತರಿಸಿ: ಈಶ್ವರಪ್ಪ
ಪಾರ್ಟಿ ಮೇಲೆ ದಾಳಿ: 110 ಅರೆ ನಗ್ನರ ಬಂಧನ
ಪುತ್ರನನ್ನು ಸಂಸದನನ್ನಾಗಿಸುವುದೇ ಗುರಿ: ಸಿಎಂ
5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ಮಹಿಳೆ
ನೀತಿ ಸಂಹಿತೆ ಉಲ್ಲಂಘನೆ: ಮಾಹಿತಿ ಕೇಳಿದ ಆಯೋಗ