ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೊಲೀಸ್ ವೆಬ್‌ಸೈಟಲ್ಲಿ ಆಚಾರ್ಯ ಬ್ಲಾಗ್‌ಗೆ ನಿರ್ಬಂಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸ್ ವೆಬ್‌ಸೈಟಲ್ಲಿ ಆಚಾರ್ಯ ಬ್ಲಾಗ್‌ಗೆ ನಿರ್ಬಂಧ
ಗೃಹ ಸಚಿವ ವಿ.ಎಸ್.ಆಚಾರ್ಯ ಅವರ ಬ್ಲಾಗ್ ಮೇಲೆ ಚುನಾವಣಾ ಆಯೋಗ ಚಾಟಿ ಬೀಸಿದೆ. ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಈ ಬ್ಲಾಗ್, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಸೈಟಿಂದ ಆಚಾರ್ಯರ ಬ್ಲಾಗ್ ಲಿಂಕ್ ಅನ್ನು ತೆಗೆದುಹಾಕಲಾಗಿದೆ. ಸರಕಾರಿ ಇಲಾಖೆಯೊಂದರ ಯಾವುದೇ ಅಧಿಕೃತ ವೆಬ್‌ಸೈಟಿನಲ್ಲಿ ಸಚಿವರ ಸ್ವಂತ ಸಾಧನೆಗಳನ್ನು ಪಟ್ಟಿ ಮಾಡುವಂತಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದಾರೆ.

ತೆರಿಗೆದಾರರ ಹಣದಲ್ಲಿ ಸರಕಾರದ ಸಾಧನೆಗಳನ್ನು ಬಿಂಬಿಸುವ ಯಾವುದೇ ಜಾಹೀರಾತುಗಳನ್ನು ನೀಡದಂತೆಯೂ ಸರಕಾರಕ್ಕೆ ಚುನಾವಣಾ ಆಯೋಗ ನಿರ್ಬಂಧಿಸಿದೆ. 'ಜಾಹೀರಾತುಗಳನ್ನು ಸರಕಾರೀ ವೆಚ್ಚದಲ್ಲಿ ಬಿಡುಗಡೆಗೊಳಿಸುವಂತಿಲ್ಲ' ಎಂದಿರುವ ವಿದ್ಯಾಶಂಕರ್, ಈ ಕುರಿತ ಸಾಕಷ್ಟು ಪ್ರಸ್ತಾಪಗಳನ್ನು ನಾವು ತಿರಸ್ಕರಿಸಿದ್ದೇವೆ ಎಂದಿದ್ದಾರೆ.

ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಸೀರೆ ವಿತರಣೆ ನಡೆಯಲಿದೆ ಎಂಬ ಕುರಿತು ಚುನಾವಣಾ ಆಯೋಗಕ್ಕೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಚುನಾವಣೆ ಸಂದರ್ಭ ಬೆಂಗಳೂರು ಸುತ್ತಮುತ್ತ ಮತದಾರರ ಓಲೈಕೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಕುರಿತು ಮಾಹಿತಿ ಲಭಿಸಿರುವುದಾಗಿ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೃಹ ಸಚಿವ, ವಿಎಸ್ಆಚಾರ್ಯ, ಬ್ಲಾಗ್
ಮತ್ತಷ್ಟು
ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ತೃತೀಯ ರಂಗದ ಸಮಾವೇಶಕ್ಕೆ ಸಾಕಷ್ಟು ಬಸ್ಸಿಲ್ಲ?
ಬಂಗಾರಪ್ಪ ನಾಲಿಗೆಯನ್ನು ಕತ್ತರಿಸಿ: ಈಶ್ವರಪ್ಪ
ಪಾರ್ಟಿ ಮೇಲೆ ದಾಳಿ: 110 ಅರೆ ನಗ್ನರ ಬಂಧನ
ಪುತ್ರನನ್ನು ಸಂಸದನನ್ನಾಗಿಸುವುದೇ ಗುರಿ: ಸಿಎಂ
5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ಮಹಿಳೆ