ಬಜೆಟ್ ಪ್ರಕಟಿತ ಹಾಗೂ ಈಗಾಗಲೇ ಸೂಚಿಸಿರುವ ಯೋಜನೆ, ಕಾಮಗಾರಿಗಳನ್ನು ಮೇ ತಿಂಗಳೊಳಗೆ ಆರಂಭಿಸಬೇಕೆಂದು ಈಗಾಗಲೇ ಅಧಿಕಾರಿಗಳೀಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಈ ಹಿಂದೆ ಬಜೆಟ್ನಲ್ಲಿ ಸೂಚಿತ ಯೋಜನೆಗಳಿಗೆ ಸೆಪ್ಟೆಂಬರ್, ಆಕ್ಟೋಬರ್ ತಿಂಗಳ ಬಳಿಕ ಚಾಲನೆ ನೀಡಲಾಗುತ್ತಿತ್ತು. ಈ ಬಾರಿ ತ್ವರಿತವಾಗಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಜನರು ಮೆಚ್ಚುವಂತಹ ಅಭಿವೃದ್ದಿಯಾಗಲಿದೆ ಎಂದರು.ಈ ಹಿಂದಿನ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಕಾರಣ. ಬಿಜೆಪಿ ಕಳೆದ 9 ತಿಂಗಳಲ್ಲಿ ಮಾಡಿರುವ ಸಾಧನೆಗಳನ್ನು ನೋಡಿ ಜನರು ಮತ ಹಾಕುತ್ತಾರೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದ 28ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಈ ಮೂಲಕ ಅಡ್ವಾಣಿಯವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಪ್ರಯತ್ನಗಳಿಗೆ ನಮ್ಮ ಕಾರ್ಯಕರ್ತರು ಸಹಕರಿಸುತ್ತಾರೆ ಎಂದರು. |