ರಾಜ್ಯ ಸರ್ಕಾರದ ಬೊಕ್ಕಸದಿಂದ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್, ಸರ್ಕಾರದ ಸಾಧನೆಗಳ ಬಗ್ಗೆ ಸರ್ಕಾರಿ ಹಣದಿಂದಲೇ ಜಾಹೀರಾತು ನೀಡುವಂತಿಲ್ಲ. ಪಕ್ಷಗಳ ವತಿಯಿಂದ ನೀಡುವ ಜಾಹೀರಾತುಗಳಿಗೆ ನಿರ್ಬಂಧವಿಲ್ಲ. ಆದರೆ, ಇದು ಪಕ್ಷಗಳ ವೆಚ್ಚಕ್ಕೆ ಸೇರಿಕೊಳ್ಳುತ್ತದೆ. ಜಾಹೀರಾತು ನೀಡುವ ಬಗ್ಗೆ ಸರ್ಕಾರದಿಂದ ಹಲವಾರು ಪ್ರಸ್ತಾಪನೆಗಳು ಬಂದಿದ್ದವು, ಈ ಪ್ರಸ್ತಾಪನೆಗಳನ್ನೆಲ್ಲ ತಿರಸ್ಕರಿಸಲಾಗಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಜಾಹೀರಾತು ಫಲಕ ಮತ್ತು ಹೋರ್ಡಿಂಗ್‌ಗಳನ್ನು ಮಾರನೇ ದಿನವೇ ಕಿತ್ತು ಹಾಕಲಾಗುವುದು ಎಂದು ಅವರು ಹೇಳಿದರು. |