ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾವಣಗೆರೆ: ಈದ್ ಮೆರವಣಿಗೆ ಮೇಲೆ ಕಲ್ಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವಣಗೆರೆ: ಈದ್ ಮೆರವಣಿಗೆ ಮೇಲೆ ಕಲ್ಲು
ಈದ್‌ಮಿಲಾದ್ ಹಬ್ಬದ ನಿಮಿತ್ತ ಇಂದು ಮುಸ್ಲಿಮರು ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ನಗರದ ಮಂಡಿಪೇಟೆ ಬಳಿ ಇರುವ ಸ್ಟೇಟ್ ಬ್ಯಾಂಕ್ ಮೈಸೂರು ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯ ಹಿನ್ನೆಲೆಯಲ್ಲಿ ನೂಕು ನುಗ್ಗಲು ಆರಂಭವಾಗಿ ಕೆಲ ಕಾಲ ನಗರಾದ್ಯಂತ ಉದ್ವಿಗ್ನ ಸ್ಥಿತಿ ನಿರ್ಮಾಣ ಉಂಟಾಗಿತ್ತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈದ್ ಉಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪ್ರಾರ್ಥನೆ ಸಲ್ಲಿಸಲು ಮೆರವಣಿಗೆ ಮೂಲಕ ತೆರಳುತ್ತಿದ್ದರು. ಮಂಡಿಪೇಟೆ ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಬಳಿ ಮೆರವಣಿಗೆ ಬರುತ್ತಿದ್ದಂತೆಯೇ ಮೆರವಣಿಗೆಯತ್ತ ಕಿಡಿಗೇಡಿಗಳು ಕಲ್ಲು ತೂರಲಾರಂಭಿಸಿದರು. ಜನರು ಗಲಿಬಿಲಿಗೊಂಡಿದ್ದರಿಂದ ನೂಕುನುಗ್ಗಲು ಆರಂಭವಾಯಿತು. ಕಲ್ಲು ತೂರಾಟದಲ್ಲಿ ಹಲವರಿಗೆ ಗಾಯವಾಗಿರುವ ಘಟನೆಯೂ ನಡೆದಿದೆ.

ತಕ್ಷಣ ವ್ಯಾಪಕ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಾರಿ ಬಂದೋಬಸ್ತ್ ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗಿದ ವರದಿಯಾಗಿಲ್ಲ, ಸಂಜೆ ವೇಳೆಗೆ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿದೆ ಎಂದು ದಾವಣಗೆರೆ ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಾವಣಗೆರೆ, ಈದ್ಮಿಲಾದ್, ಮಂಡಿಪೇಟೆ
ಮತ್ತಷ್ಟು
ಸುದೀಪ್ ಜೆಡಿಎಸ್ ಬಳ್ಳಾರಿ ಕ್ಯಾಂಡಿಡೇಟ್?
ತೃತೀಯರಂಗದ ತೆಕ್ಕೆಗೆ ಬಿಜೆಡಿ: ಗೌಡ
ಸರ್ಕಾರಿ ಜಾಹೀರಾತಿಗೆ ಆಯೋಗ ಕಡಿವಾಣ
ಯತ್ನಾಳ್ ಹೇಳಿಕೆಗೆ ಈಶ್ವರಪ್ಪ ತರಾಟೆ
22 ಸ್ಥಾನ ಗೆಲ್ಲುವುದು ಖಚಿತ: ಸಿಎಂ ಭರವಸೆ
ತೃತೀಯರಂಗ ಸಮಾವೇಶ: ಬಸ್ಸು ರಾಜಕೀಯ