ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯಬಿಜೆಪಿ ಒಡಕಿಗೆ ಸಂಧಾನದ ಮುಲಾಮು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಬಿಜೆಪಿ ಒಡಕಿಗೆ ಸಂಧಾನದ ಮುಲಾಮು
ಆಡಳಿತರೂಢ ಬಿಜೆಪಿಯಲ್ಲಿ ಎದ್ದಿರುವ ಆಂತರಿಕ ಭಿನ್ನಮತ ಮತ್ತಷ್ಟು ಉಲ್ಭಣಿಸದಂತೆ ತಡೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಧ್ಯ ಪ್ರವೇಶ ಮಾಡಿದೆ.

ಟಿಕೆಟ್ ಹಂಚಿಕೆಯ ಗೊಂದಲದಿಂದ ಮುನಿಸಿಕೊಂಡಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅನಂತ್ ಕುಮಾರ್ ಮತ್ತವರ ಬೆಂಗಲಿಗರನ್ನು ಚುನಾವಣೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳವ ನೀರೀಕ್ಷೆಯಿದೆ.

ಈ ನಿಟ್ಟಿನಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಅನಂತ್ ಕುಮಾರ್ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಬಿಜೆಪಿ ಮುಂದಾಗಿದೆ. ಈ ಕುರಿತು ನಡೆದ ಸಭೆಯಲ್ಲಿ ಅನಂತ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಇದೇ ವೇಳೆ ರಾಜ್ಯಾಧ್ಯಕ್ಷರು ಎಲ್ಲಾ ನಾಯಕರೊಂದಿಗೆ ವಿಸ್ವಾಸದಿಂದ ಮುನ್ನಡೆಯುವಂತೆ ಸಂಘ ಪರಿವಾರದ ಮುಖಂಡರು ಹಿತವಚನ ನೀಡಿದ್ದಾರೆ ಎನ್ನಲಾಗಿದೆ.

ಮಾತುಕತೆ ವಿಫಲ:
ಈ ನಡುವೆ ಬಿಜೆಪಿ ಹಾಗೂ ಸಂಘ ಪರಿವಾರದ ಧೋರಣೆ ವಿರುದ್ಧ ಬಹಿರಂಗವಾಗಿ ಸಿಡಿದೆದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವ ಸ್ವಾಭಿಮಾನಿ ವೇದಿಕೆ ಸಂಸ್ಥಾಪಕ ರಾಮ ಭಟ್ ಜತೆ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರ ಮಾತುಕತೆ ವಿಫಲವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೆತ್ರದಲ್ಲಿ ಸ್ವಾಭಿಮಾನಿ ವೇದಿಕೆ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದೆಂಬ ಸದಾನಂದ ಗೌಡರ ವಿನಂತಿಯನ್ನು ರಾಮಭಟ್ ತಿರಸ್ಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾವಣಗೆರೆ: ಈದ್ ಮೆರವಣಿಗೆ ಮೇಲೆ ಕಲ್ಲು
ಸುದೀಪ್ ಜೆಡಿಎಸ್ ಬಳ್ಳಾರಿ ಕ್ಯಾಂಡಿಡೇಟ್?
ತೃತೀಯರಂಗದ ತೆಕ್ಕೆಗೆ ಬಿಜೆಡಿ: ಗೌಡ
ಸರ್ಕಾರಿ ಜಾಹೀರಾತಿಗೆ ಆಯೋಗ ಕಡಿವಾಣ
ಯತ್ನಾಳ್ ಹೇಳಿಕೆಗೆ ಈಶ್ವರಪ್ಪ ತರಾಟೆ
22 ಸ್ಥಾನ ಗೆಲ್ಲುವುದು ಖಚಿತ: ಸಿಎಂ ಭರವಸೆ