ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾ.16: ಭಿನ್ನಮತೀಯ ಬಿಜೆಪಿ ಸಮಾವೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾ.16: ಭಿನ್ನಮತೀಯ ಬಿಜೆಪಿ ಸಮಾವೇಶ
ಬಿಜೆಪಿ ಪಕ್ಷದ ರಾಜ್ಯ ನಾಯಕರ ವಿರುದ್ಧ ಬಂಡಾಯ ಎದ್ದಿರುವ ಬಿಜೆಪಿಯ ಭಿನ್ನಮತೀಯ ಮುಖಂಡರು 'ಬಿಜೆಪಿ ಉಳಿಸಿ- ಮೂಲ ಕಾರ್ಯಕರ್ತರನ್ನು ರಕ್ಷಿಸಿ' ಆಂದೋಲನ ಹಮ್ಮಿಕೊಂಡಿದ್ದು, ಮಾರ್ಚ್ 16ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲುದ್ದೇಶಿಸಿದ್ದಾರೆ.

"ನಮ್ಮ ಹೋರಾಟ ಅಧಿಕಾರಕ್ಕಾಗಿ ಅಲ್ಲ, ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಬಾರದು, ಅರ್ಹರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಬೇಕು ಎಂಬುದಷ್ಟೇ ನಮ್ಮ ಬೇಡಿಕೆ" ಸಮಾವೇಶದ ರೂವಾರಿಗಳಲ್ಲೊಬ್ಬರಾಗಿರುವ ಸಂಸದ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

"ನಮ್ಮ ಹೋರಾಟಕ್ಕೆ ರಾಜ್ಯದ ವಿವಿಧೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ, ಮಾಜಿ ಸಂಸದ ಬಿ.ಜಿ.ಜವಳಿ, ಮುಖಂಡರಾದ ಪ್ರಕಾಶ್ ಖಂಡ್ರೆ, ರಾಂಭಟ್ ಸೇರಿದಂತೆ ಅನೇಕ ಮುಖಂಡರು ನಮ್ಮನ್ನು ಬೆಂಬಲಿಸಿದ್ದು, ಇವರೆಲ್ಲ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಒಂದೇ ಜಿಲ್ಲೆಗೆ ಸೇರಿದ 8-10 ಮಂದಿಗೆ ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿರುವುದು, ಹಿರಿಯ ಮುಖಂಡರಾದ ಬಿ.ಬಿ.ಶಿವಪ್ಪ, ಎಸ್.ಮ್ಲಲಿಕಾರ್ಜುನಯ್ಯ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಇರುವುದು ನಮಗೆ ಬೇಸರವನ್ನುಂಟು ಮಾಡಿದೆ. ಇದೇ ರೀತಿ ಯಡಿಯೂರಪ್ಪ ಮಾಡಿರುವ ತಪ್ಪುಗಳ ಪಟ್ಟಿ ಮಾಡಿಕೊಂಡು ಜನರ ಮುಂದೆ ಹೋಗುತ್ತೇವೆ ಎಂದು ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ನೀಡಿರುವ ಟಿಕೆಟ್ ವಾಪಸ್ ಪಡೆಯಬೇಕು ಎಂದೂ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಬಹುತೇಕ ಉತ್ತರ ಕರ್ನಾಟಕ ಭಾಗದಿಂದ ಆಂದೋಲನ ಶುರುವಾಗಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಬೇಸರಗೊಂಡಿರುವ ಇನ್ನಷ್ಟು ಮುಖಂಡರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಹೋರಾಟಕ್ಕೆ ಅನೇಕ ಮಂದಿ ಬೆಂಬಲ ವ್ಯಕ್ತಪಡಿಸಿರುವುದು ಶುಭ ಸೂಚನೆಯಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಭಿನ್ನರಿಗೆ ಬೆಂಬಲ ನೀಡಲು ಮುಂದಾದ ರಾಮ ಸೇನೆ
ಅಪ್ಪನಿರಲಿ, ಮಗನಿರಲಿ ಗೆಲುವು ನನ್ನದೇ: ರಾಘವೇಂದ್ರ
ರಾಜ್ಯಬಿಜೆಪಿ ಒಡಕಿಗೆ ಸಂಧಾನದ ಮುಲಾಮು
ದಾವಣಗೆರೆ: ಈದ್ ಮೆರವಣಿಗೆ ಮೇಲೆ ಕಲ್ಲು
ಸುದೀಪ್ ಜೆಡಿಎಸ್ ಬಳ್ಳಾರಿ ಕ್ಯಾಂಡಿಡೇಟ್?
ತೃತೀಯರಂಗದ ತೆಕ್ಕೆಗೆ ಬಿಜೆಡಿ: ಗೌಡ