ದೇಶಾದ್ಯಂತ ಇದೀಗ ಚುನಾವಣಾ ರಂಗು ಮುಗಿಲುಮುಟ್ಟಿದೆ. ಜನತಾ ಪರಿವಾರದಿಂದ ಹೊರ ಹೊಗಿರುವ ನಾಯಕರನ್ನು ಮತ್ತೆ ಜೆಡಿಎಸ್ಗೆ ಮರಳುವಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕರೆ ನೀಡಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಪಿ ತೊರೆದ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಜನತಾ ಪರಿವಾರವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜೆಡಿಎಸ್ ತೊರೆದ ನಾಯಕರು ಮತ್ತೆ ಪಕ್ಷ ಸೇರುವಂತೆ ಆಹ್ವಾನ ನೀಡಿದರು.
ನಾವು ಕಚ್ಚಾಡುವುದು ಸಹಜ. ಕೆಟ್ಟ ಗಳಿಗೆಯಲ್ಲಿ ಭಿನ್ನಾಭಿಪ್ರಾಯ ಬಂದು ಹೊರಹೋಗಿದ್ದಾರೆ. ಅಂತವರು ಮತ್ತೆ ಪಕ್ಷಕ್ಕೆ ಬರುವುದದರೆ ಬರಲಿ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಜೀವವೂ ಇಲ್ಲ ಎಂದು ಇಲ್ಲಿಂದ ಹೊರ ಹೋದ ಹಲವು ನಾಯಕರು ಟೀಕಿಸುತ್ತಿದ್ದಾರೆ. ಆದರೆ ಬೇರೆ ಪಕ್ಷದ ಅನೇಕರು ತಮ್ಮ ಸಿದ್ದಾಂತವನ್ನು ಮೆಚ್ಚಿ ಬರುತ್ತಿದ್ದಾರೆ ಎಂದು ತಿಳಿಸಿದರು. |