ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಬಂಡಾಯ: ಸಿಎಂ ಸಂಧಾನ ಯಶಸ್ವಿ
ಲೋಕಸಭಾ ಚುನಾವಣೆ ಬಂದು ಮೆಟ್ಟಿಲಲ್ಲಿ ನಿಂತಿರುವಂತೆ, ಭಾರತೀಯ ಜನತಾ ಪಕ್ಷದಲ್ಲಿ ಎದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗುರವಾರ ನಡೆದ ಸಂಧಾನ ಸಭೆ ಧನಾತ್ಮಕ ಫಲಿತಾಂಶ ಬೀರಿದೆ. ಹಿರಿಯ ಮುಖಂಡ ಬಿಬಿ ಶಿವಪ್ಪ, ಸಂಸದ ಮಲ್ಲಿಕಾರ್ಜುನಯ್ಯ ಅವರೊಂದಿಗೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಾತು ನಡೆಸಲಾಗಿದ್ದು, ಅತೃಪ್ತರ ಮನವೊಲಿಸುವಲ್ಲಿ ಯಡಿಯೂರಪ್ಪ ಬಣ ಯಶಸ್ವಿಯಾಯಿತು.

ಸಂಧಾನ ಸಭೆಯ ನಂತರ ಮಾತನಾಡಿದ ಯಡಿಯೂರಪ್ಪ, ಆಡಳಿತ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳಿಗೆ ಬಂಡಾಯ, ಅಸಮಾಧಾನ ಇರುವುದು ಸಹಜ. ಹಿರಿಯರಾದ ಶಿವಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರ ಎಲ್ಲ ಮನವಿ ಹಾಗೂ ಸೂಚನೆಗಳನ್ನು ಸುದೀರ್ಘವಾಗಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಅವುಗಳನ್ನು ಬದೆಹರಿಸಲಾಗುವುದು ಎಂದು ಹೇಳಿದರು.

ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಉಳಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಇಬ್ಬರು ನಾಯಕರು ಸಮ್ಮತಿಸಿದ್ದರು. ಈ ಹಿನ್ನೆಲೆಯಲ್ಲಿ ಗುರವಾರ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ಬಂಡಾಯ ತಾತ್ಕಾಲಿಕ ಶಮನವಾದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಡ, ಪ್ರಾದೇಶಿಕ ಪಕ್ಷಗಳಿಂದ 'ತೃತೀಯ ಶಕ್ತಿ'ಗೆ ಚಾಲನೆ
ವಿದ್ಯುತ್ ಸಮಸ್ಯೆಯಿಂದ ನೀರಿಗೆ ಅಭಾವ: ಶೋಭಾ
ತರಾತುರಿಯಲ್ಲಿ ದೀಪಬೆಳಗಿ ಉದ್ಘಾಟಿಸಿದ ಗೌಡರು
ಹಾವೇರಿ: ಮೆರವಣಿಗೆ ವಿವಾದ, ನಿಷೇದಾಜ್ಞೆ ಜಾರಿ
ಚುನಾವಣೆ: ಮ‌ೂರು ಜಿಲ್ಲಾಧಿಕಾರಿಗಳ ಎತ್ತಂಗಡಿ
ಮರಳಿ ಗೂಡಿಗೆ ಬನ್ನಿ: ಪರಿವಾರದವರಿಗೆ ಗೌಡರ ಕರೆ